ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ  ಶ್ರೀ ದೇವರ ಘೋಷಯಾತ್ರೆ ಇಂದು

ಕಾಸರಗೋಡು:  ನಗರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಪ್ರಯುಕ್ತ ನಿನ್ನೆ ಆಯುಧಪೂಜೆ, ಸಂಜೆ ವಿಶ್ವರೂಪ ದರ್ಶನ, ನೃತ್ಯ ವೈವಿಧ್ಯ, ರಾತ್ರಿ  ಮಹಾಪೂಜೆ, ಶ್ರೀ ದೇವರ ಉತ್ಸವಬಲಿ, ಅಶ್ವತ್ಥ ಕಟ್ಟೆಗೆ ಘೋಷಯಾತ್ರೆ, ಕಟ್ಟೆಪೂಜೆ ನಡೆಯಿತು. ಇಂದು ಬೆಳಿಗ್ಗೆ  ಕದಿರು ತುಂಬಿಸುವ ಕಾರ್ಯಕ್ರಮ ನಡೆದಿದ್ದು, ಮಧ್ಯಾಹ್ನ ನವಾನ್ನ, ಸಂಜೆ ಗಂಟೆ 5ರಿಂದ ಕಾಸರಗೋಡು ಶ್ರೀ ಪುರಂದರದಾಸ ಸಂಗೀತ ಕಲಾ ಮಂದಿರದವರಿಂದ ಸಂಗೀತಸೇವೆ, ರಾತ್ರಿ 9.30ಕ್ಕೆ ಶ್ರೀ ದೇವರ ಘೋಷಯಾತ್ರೆ ಹೊರಟು ಶಾಂತಾರಾಮ-ಸುಧಾಕರ ರಸ್ತೆ, ಬೀಚ್‌ರಸ್ತೆ, ಮಠದಪೇಟೆ, ನಾಗರಾಜ ಕಟ್ಟೆಯಾಗಿ ಅಶ್ವತ್ಥಕಟ್ಟೆಯ ಮುಂಭಾ ಗದಲ್ಲಿ  ವಿವಿಧ ಛದ್ಮವೇಷಗಳ ಪ್ರದರ್ಶನ, ಹುಲಿವೇಷದವರಿಂದ ವೈವಿಧ್ಯಮಯ ಕುಣಿತ, 11.3೦ಕ್ಕೆ ಕಟ್ಟೆಪೂಜೆ, ೧೨ಕ್ಕೆ ಶ್ರೀ ಕ್ಷೇತ್ರದಲ್ಲಿ ದರ್ಶನಬಲಿ, ರಾಜಾಂಗಣ ಪ್ರಸಾದ, ಮಹಾಪೂಜೆ ನಡೆಯಲಿರುವುದು.
 
 

RELATED NEWS

You cannot copy contents of this page