ಕಾಸರಗೋಡು: ನಗರಸಭೆ ಆಡಳಿತದಲ್ಲಿ ತುರ್ತು ಸನ್ನಿವೇಶಗಳಲ್ಲಿ ಮಾತ್ರ ವಿನಿಯೋಗಿಸಬೇಕಾದ ಪ್ರತ್ಯೇಕ ಪರಮಾಧಿಕಾರವನ್ನು ಕ್ಷುಲ್ಲಕ ಕಾರಣಗಳಿಗಾಗಿ ನಗರಸಭಾ ಅಧ್ಯಕ್ಷೆ ದುರುಪಯೋಗ ಮಾಡುತ್ತಿರುವುದಾಗಿ ಬಿಜೆಪಿ ಕೌನ್ಸಿಲರ್ ಹಾಗೂ ವಿಪಕ್ಷ ಮುಖಂಡ ಕೆ. ರವೀಂದ್ರ ಪೂಜಾರಿ ಟೀಕಿಸಿದ್ದಾರೆ. ನಗರಸಭೆಯ ಪ್ರಧಾನ ಸೊತ್ತುಗಳಾದ ಸೀವ್ಯೂ ಪಾರ್ಕ್, ಕೆಪಿಆರ್ ರಾವ್ ರಸ್ತೆಯ ಪಾರ್ಕಿಂಗ್ ಕೇಂದ್ರಗಳು ಎಂಬಿವು ಸಾರ್ವಜನಿಕ ಚರ್ಚೆಗಳಿಲ್ಲದೆ ಏಕಪಕ್ಷೀಯವಾಗಿ ಖಾಸಗೀಕರಣಗೊಳಿಸಲಿರುವ ನಗರಸಭಾಧ್ಯಕ್ಷೆಯ ಯತ್ನ ಶಂಕಾಸ್ಪದ ಹಾಗೂ ಕಾನೂನುಬಾಹಿರವಾಗಿದೆ ಎಂದು ಅವರು ಆರೋಪಿಸಿದರು. ನಗರದ ಪ್ರಧಾನ ಪ್ರವಾಸಿ ಕೇಂದ್ರವಾದ ಸೀವ್ಯೂ ಪಾರ್ಕ್ ಪಿಪಿಪಿ (ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಜ್ಯಾರಿಗೊಳಿಸಲು ಸಿದ್ಧವಾಗುತ್ತಿರುವ ಆಡಳಿತ ಸಮಿತಿ, ಈ ಮೂಲಕ ನಗರಸಭೆಗೆ ಉಂಟಾಗುವ ಲಾಭ ನಷ್ಟಗಳು ಏನೆಲ್ಲವೆಂದು, ಖಾಸಗಿ ವ್ಯಕ್ತಿಗಳ ಠೇವಣಿ ಎಷ್ಟಾಗಿದೆ ಎಂದು, ಚಟುವಟಿಕಾ ರೂಪುರೇಶೆಗಳು ಹೇಗಿದೆ ಎಂಬುದರ ಬಗ್ಗೆ ಯಾವುದೇ ರೀತಿಯ ಅಧ್ಯಯನ ವರದಿ ಸಿದ್ಧಪಡಿಸಲಾಗಿಲ್ಲ. ಕೌನ್ಸಿಲ್ ಸಭೆಯಲ್ಲಿ ಅಥವಾ ಸಂಬಂಧಪಟ್ಟ ಸ್ಥಾಯಿ ಸಮಿತಿಗಳಲ್ಲಿ ಯಾವುದೇ ರೀತಿಯ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ಪತ್ರಿಕೆಗಳಲ್ಲಿ ಆಸಕ್ತಿ ಪತ್ರ ಆಹ್ವಾನಿಸಲಾಗಿದೆ. ಇದಕ್ಕಾಗಿ ಲಭಿಸಿದ ಎರಡು ಅರ್ಜಿಗಳಲ್ಲಿ ಸೂಕ್ತ ಕಾರಣವೇನೂ ಇಲ್ಲದೆ ತಿರಸ್ಕರಿಸಿದ್ದು, ಮತ್ತೆ ಹೊಸ ಆದೇಶ ಹೊರಡಿಸಲು ಮುಂದಾಗುತ್ತಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೊದಲ ಜಾಹೀರಾತಿಗಾಗಿ ವೆಚ್ಚ ಮಾಡಿದ ತೆರಿಗೆ ಹಣವಾದ ೪೫೦೦ ರೂ.ನಷ್ಟು ಪೋಲಾಯಿತೆಂದು ಇದಕ್ಕೆ ನಗರಸಭೆ ಅಧ್ಯಕ್ಷೆ ಹೊಣೆಯಾ ಗಿದ್ದಾರೆಂದು ರವೀಂದ್ರ ಪೂಜಾರಿ ಆರೋಪಿಸಿದರು.
ಇಂಟರ್ ಲಾಕ್ ಹಾಕಿ ಲೋಕಾ ರ್ಪಣೆಗೈದ ಕೆಪಿಆರ್ ರಾವ್ ರಸ್ತೆ ಪರಿಸರದಲ್ಲಿ ಯಾವುದೇ ಮುನ್ನೆಚ್ಚರಿಕೆ ನೀಡದೆ, ಕೌನ್ಸಿಲ್ನ ಒಪ್ಪಿಗೆ ಪಡೆಯದೆ ಪೇ-ಪಾರ್ಕಿಂಗ್ ಏರ್ಪಡಿಸಲು, ಪಿಪಿಪಿ ಮಾದರಿಯಲ್ಲಿ ಗುತ್ತಿಗೆ ನೀಡಲು ನಗರಸಭಾಧ್ಯಕ್ಷೆ ತುರ್ತು ಅಧಿಕಾರ ಉಪಯೋಗಿಸಿ ತೀರ್ಮಾನ ಕೈಗೊಂ ಡಿದ್ದಾರೆ. ಇದು ಸಾರ್ವಜನಿಕ ಆಸಕ್ತಿಯನ್ನು ಬಲಿ ನೀಡಿ ಕೆಲವು ಪ್ರತ್ಯೇಕ ವ್ಯಕ್ತಿಗಳಿಗೆ ಲಾಭ ಉಂಟುಮಾಡಿ ಕೊಡಲಿರುವ ದುರುದ್ದೇಶಪೂರಿತವಾಗಿದೆ ಎಂದು ರವೀಂದ್ರ ಆರೋಪಿಸಿದ್ದಾರೆ. ಕೇರಳ ನಗರಸಭಾ ಕಾನೂನು ಪ್ರಕಾರ ಅಧ್ಯಕ್ಷೆಗೆ ನೀಡಿರುವ ತುರ್ತು ಪರಮಾಧಿಕಾರ ಪ್ರಕೃತಿ ವಿಕೋಪಗಳು, ಸಾಂಕ್ರಾಮಿಕ ರೋಗಗಳು ಅಥವಾ ಜನರ ಜೀವ ಹಾಗೂ ಸೊತ್ತಿಗೆ ತುರ್ತು ಭದ್ರತೆ ಬೇಕಾಗಿ ಬರುವ ಹಂತಗಳಿಗೆ ಮಾತ್ರವೇ ಸೀಮಿತಗೊಳಿಸ ಲಾಗಿದೆ. ಆದರೆ ಹಲವು ವರ್ಷ ಕಾಲ ಆರ್ಥಿಕ ಬಾಧ್ಯತೆ ಉಂಟುಮಾಡಬ ಹುದಾದ ಪಿಪಿಪಿ ಯೋಜನೆಗಳು ಚರ್ಚೆ ಇಲ್ಲದೆ ಜ್ಯಾರಿಗೊಳಿಸಲು ಈ ಅಧಿಕಾರವನ್ನು ಆಯುಧವನ್ನಾಗಿ ಮಾಡಿರುವುದು ಸಂಪೂರ್ಣ ಪ್ರಜಾಪ್ರಭುತ್ವ ವಿರುದ್ಧವಾದ ಕ್ರಮವೆಂದು ಅವರು ಆರೋಪಿಸಿದರು. ಈ ರೀತಿಯ ನಿಲುವು ನಗರಸಭಾಧ್ಯಕ್ಷೆ ಮುಂದು ವರಿಸಿದರೆ ಬಿಜೆಪಿ ತೀವ್ರ ಪ್ರತಿಭಟನೆಗೆ ಮುಂದಾಗಲಿದೆ ಎಂದು ಅವರು ನುಡಿದರು. ಈ ಅನಧಿಕೃತ ಆದೇಶಗಳನ್ನು ಶೀಘ್ರವೇ ಹಿಂತೆಗೆಯಬೇಕೆಂದು, ಕೌನ್ಸಿಲ್ನಲ್ಲಿ ಪಾರದರ್ಶಕ ಚರ್ಚೆ ನಡೆಸಬೇಕೆಂದು ಇಲ್ಲದಿದ್ದರೆ ನಗರಸಭಾ ಕಚೇರಿ ಮುಂಭಾಗದಲ್ಲಿ ಧರಣಿ, ಸತ್ಯಾಗ್ರಹ ನಡೆಸಲಾಗುವುದೆಂದು ಅವರು ಎಚ್ಚರಿಸಿದ್ದಾರೆ. ಈ ಬಗ್ಗೆ ನಗರಸಭಾ ಇಲಾಖೆ ನಿರ್ದೇಶಕರಿಗೆ, ಸ್ಥಳೀಯಾ ಡಳಿತ ಓಂಬುಡ್ಸ್ಮ್ಯಾನ್ಗೆ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ.






