ಹೊಸದುರ್ಗ: ಪೆರಿಯ ಮೂನಾಂಕಡವ್ ಏರು ರಸ್ತೆಯಲ್ಲಿ ಟ್ಯಾಂಕರ್ ಲಾರಿ ಸಿಲುಕಿಕೊಂಡಿದೆ. ಇಂದು ಬೆಳಿಗ್ಗೆ 9.45ರ ವೇಳೆ ಕುಂಡಂಗುಳಿ ಭಾಗದಿಂದ ಇಂಧನ ತುಂಬಿಸಿ ಆಗಮಿಸುತ್ತಿದ್ದ ಟ್ಯಾಂಕರ್ ಲಾರಿ ರಸ್ತೆಯ ಏರು ಹಾಗೂ ತಿರುವು ಇರುವ ಸ್ಥಳದಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಪೆರಿಯ- ಕುಂಡಂಗುಳಿ ರೂಟ್‌ನಲ್ಲಿ ಬಸ್ ಸಂಚಾರಕ್ಕೆ ತೊಡಕುಂಟಾಯಿತು. ಲಾರಿಯನ್ನು ತೆರವುಗೊಳಿಸಲಿರುವ ಯತ್ನ ಆರಂಭಿಸಲಾಗಿದೆ. ಆದರೆ ಟ್ಯಾಂಕರ್‌ನಲ್ಲಿ ತುಂಬ ಇಂಧನ ಇರುವ ಹಿನ್ನೆಲೆಯಲ್ಲಿ ತೆರವುಗೊಳಿಸಲು ಸಾಧ್ಯವಾಗಲಿಲ್ಲ. ಲಾರಿ ಹಿಂದಕ್ಕೆ ಚಲಿಸಿದರೆ ಬಹುದೊಡ್ಡ ದುರಂತಕ್ಕೆ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇತ್ತೀಚೆಗೆ ಗೊಬ್ಬರ ಹೇರಿಕೊಂಡು ಸಂಚರಿಸುತ್ತಿದ್ದ ಲಾರಿ ಮಗುಚಿದ ಸ್ಥಳಕ್ಕೆ ಸಮೀಪದಲ್ಲೇ ಟ್ಯಾಂಕರ್ ಲಾರಿಯು ಇಂದು ಸಿಲುಕಿಕೊಂಡಿದೆ.






