ಮಂಜೇಶ್ವರ: ಕಾರು- ಬೈಕ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟರು. ಕೊಡ್ಲಮೊಗರು ಬಟ್ಟಿಪದವು ನಿವಾಸಿ ಉಮ್ಮರ್ರ ಪುತ್ರ ಟಿ. ಮೊಹಮ್ಮದ್ 30) ಮೃತಪಟ್ಟವರು. ಸೋಮವಾರ ಸಂಜೆ 5.30ರ ವೇಳೆ ಸುಂಕದಕಟ್ಟೆ- ಆನೆಕಲ್ಲು ರಸ್ತೆಯ ಮೊರತ್ತಣೆ ಸಮೀಪದ ಬೇಕರಿ ಜಂಕ್ಷನ್ನಲ್ಲಿ ಅಪಘಾತ ಸಂಭವಿಸಿದೆ. ಮುಹಮ್ಮದ್ ಸಂಚರಿಸಿದ ಬೈಕ್ಗೆ ಆನೆಕಲ್ಲು ಭಾಗದಿಂದ ಬಂದ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಮೊಹಮ್ಮದ್ನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಮಧ್ಯೆ ರಾತ್ರಿ ವೇಳೆ ಮೃತಪಟ್ಟರು. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.






