ಕುಂಬಳೆ: ಕುಂಬಳೆ ಪೇಟೆಯಲ್ಲಿ ಈ ಹಿಂದೆ ಇದ್ದ ಮೀನು ಮಾರುಕಟ್ಟೆ ಮುರಿದು ತೆಗೆದು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಿಂದ ೧ಕೋಟಿ ೧ಲಕ್ಷ ರೂ. ಖರ್ಚು ಮಾಡಿ ಹೊಸ ಮೀನು ಮಾರುಕಟ್ಟೆ ಕಟ್ಟಡ ನಿರ್ಮಿಸಲಾಯಿತಾದರೂ ಅದನ್ನು ತೆರೆದುಕೊಡಲು ಇನ್ನು ಕೂಡಾ ಕ್ರಮ ಉಂಟಾಗಲಿಲ್ಲ. ಮಾತ್ರವಲ್ಲದೆ ಇತರ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸಲು ವಿಳಂಬವಾಗುತ್ತಿರು ವುದಾಗಿ ಹೇಳಲಾಗುತ್ತಿದೆ. ಇದರಿಂದ ಕಟ್ಟಡ ಕುಂಬಳೆ ಪೇಟೆಯಲ್ಲಿ ಪ್ರದರ್ಶನ ವಸ್ತುವಾಗಿ ಉಳಿದುಕೊಂಡಿದೆ.
ಕಟ್ಟಡ ನಿರ್ಮಾಣದ ಕೆಲಸಗಳು ಬಹುತೇಕ ಪೂರ್ಣ ಗೊಂಡಿದೆ. ಅತ್ಯಾಧುನಿಕ ಸೌಕರ್ಯಗಳೊಂದಿಗೆ ನಿರ್ಮಿಸಿದ ಕಟ್ಟಡದ ಮುಂದೆ ತ್ಯಾಜ್ಯವನ್ನು ರಾಶಿಹಾಕಲಾಗುತ್ತಿದೆ. ಮಾತ್ರವಲ್ಲದೆ ತ್ಯಾಜ್ಯನೀರು ಕೂಡಾ ಈ ಪರಿಸರದಲ್ಲಿ ಹರಿಯುತ್ತಿದೆ.ಮೀನು ಮಾರುಕಟ್ಟೆಯ ತ್ಯಾಜ್ಯನೀರು ಹರಿದು ಬಿಡುವ ಚರಂಡಿ ವ್ಯವಸ್ಥೆ ಇದುವರೆಗೆ ನಡೆದಿಲ್ಲ. ಪ್ರಸ್ತುತ ಇರುವ ಸಣ್ಣ ಚರಂಡಿ ಮೂಲಕ ಮಲಿನಜಲ ಹರಿಯುತ್ತಿರುವುದರಿಂದ ಅದು ರಸ್ತೆಗೂ ತಲುಪುತ್ತಿದೆ ಎಂದು ಮೀನು ಮಾರಾಟಗಾರರು ತಿಳಿಸುತ್ತಿದ್ದಾರೆ. ತ್ಯಾಜ್ಯನೀರು ತುಂಬಿಕೊಂಡು ಈ ಪರಿಸರದಲ್ಲಿ ದುರ್ನಾತ ಬೀರುತ್ತಿದೆ. ಇದು ಸಮೀಪದ ವ್ಯಾಪಾರಿಗಳಿಗೂ ತೀವ್ರ ಸಮಸ್ಯೆ ಸೃಷ್ಟಿಸುತ್ತಿದೆ. ಮೀನು ಮಾರಾಟಗಾರರ ಶೌಚಾಲಯ, ಶುಚೀಕರಣಕ್ಕಿರುವ ಶುದ್ಧನೀರು, ಬೆಳಕು ಇನ್ನಷ್ಟೇ ಸಿದ್ಧಪಡಿಸಬೇ ಕಾಗಿದೆ. ಆದರೆ ಮಾತ್ರವೇ ಕಟ್ಟಡವನ್ನು ತೆರೆದುಕೊಡಲು ಸಾಧ್ಯವಿದೆ. ಈ ಕ್ರಮಗಳಿಗೆ ವಿಳಂಬವಾಗಲು ಪಂಚಾಯತ್ನ ನಿರ್ಲಕ್ಷ್ಯವೇ ಕಾರಣವಾಗಿದೆಯೆಂಬ ಆರೋಪ ಕೇಳಿಬರುತ್ತಿದೆ. ಮೀನು, ಮಾಂಸ, ತರಕಾರಿ ಮಾರಾಟವನ್ನು ಒಂದೇ ಸ್ಥಳದಲ್ಲಿ ನಡೆಸಲಿರುವ ಯೋಜನೆಯಾ ಗಿದೆ ಇದು. ಆದರೆ ಪ್ರಸ್ತುತವುಳ್ಳ ಕಟ್ಟಡ ದಲ್ಲಿ ಮೀನು ಮಾರಾಟ ನಡೆಸಲು ಸಾಧ್ಯವಿಲ್ಲ ವೆಂದು ಮೀನು ಮಾರಾಟಗಾರರು ಹೇಳುತ್ತಿದ್ದಾರೆ. ಇದೇ ವೇಳೆ ಮೀನು ಮಾರುಕಟ್ಟೆ ತೆರೆದುಕೊಡಲು ಕೆಲವು ಅಡಚಣೆಗಳು ಎದುರಾಗಿರುವು ದಾಗಿ ಪಂಚಾಯತ್ ಆಡಳಿತ ಸಮಿತಿ ಸದಸ್ಯರು ಹೇಳುತ್ತಿದ್ದಾರೆ.






