ಯುವತಿಯ ತಾಯಿಯಿಂದ 24 ಪವನ್ ಚಿನ್ನಾಭರಣ ಪಡೆದು ವಂಚಿಸಿರುವುದಾಗಿ ದೂರು: ಯುವಕನ ವಿರುದ್ಧ ಕೇಸು ; ಅಪರಿಮಿತ ಮಾತ್ರೆ ಸೇವಿಸಿದ ಯುವತಿ ಗಂಭೀರ ಸ್ಥಿತಿಯಲ್ಲಿ

ಕುಂಬಳೆ: ಯುವತಿಯ ತಾಯಿಯ 24 ಪವನ್ ಚಿನ್ನಾಭರಣವನ್ನು ಬೆದರಿಕೆಯೊಡ್ಡಿ ಯುವಕ ಪಡೆದುಕೊಂಡಿರುವುದಾಗಿ ದೂರಲಾಗಿದೆ. ಅದನ್ನು ಮರಳಿ ಕೇಳಿದ ದ್ವೇಷದಿಂದ ಯುವತಿಯನ್ನು ಕಾರಿನಲ್ಲಿ ಕೂಡಿಹಾಕಿ   ಹಲ್ಲೆಗೈದ ಬಗ್ಗೆ ದೂರಲಾಗಿದೆ. ೨೨ರ ಹರೆಯದ ಯುವತಿ ನೀಡಿದ ದೂರಿನಂತೆ ಕಾಸರಗೋಡಿನ ಯೂಸಫ್ ಇರ್ಷಾದ್ ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ದೂರುದಾತೆಯಾದ ಯುವತಿ ಹಾಗೂ ಯೂಸಫ್ ಇರ್ಷಾದ್ ಪರಿಚಯಸ್ಥರಾಗಿದ್ದಾರೆ. ಈ ಮಧ್ಯೆ ದೂರುದಾತೆಯ ಜೊತೆಗೆ ನಿಂತ ಪೋಟೋ ತೋರಿಸಿ ಬೆದರಿಕೆಯೊಡ್ಡಿ  ಮರಳಿ ನೀಡುವುದಾಗಿ ತಿಳಿಸಿ ಯುವತಿಯ ತಾಯಿಯಿಂದ 24 ಪವನ್ ಚಿನ್ನಾಭರಣವನ್ನು ಈತ ವಶಪಡಿಸಿಕೊಂಡಿರುವುದಾಗಿ ದೂರಲಾಗಿದೆ. ಆದರೆ ಚಿನ್ನಾಭರಣವನ್ನು ಮರಳಿ ನೀಡಲಿಲ್ಲ. ಶನಿವಾರ ಬಂದ್ಯೋಡಿನಲ್ಲಿ ಚಿನ್ನ ಮರಳಿ ನೀಡುವಂತೆ ಕೇಳಿದ ಯುವತಿಯನ್ನು ಕಾರಿನಲ್ಲಿ ಕೂಡಿ ಹಾಕಿ ಹಲ್ಲೆಗೈದು ಗಾಯಗೊಳಿಸಿರು ವುದಾಗಿ ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಇದೇ ವೇಳೆ ದೂರುದಾತೆಯಾದ ಯುವತಿ ಪಾರಾಸಿಟಮಾಲ್ 650 ಎಂಬ ಹೆಸರಿನ 20 ಮಾತ್ರೆಗಳನ್ನು ಸೇವಿಸಿದ್ದು, ಇದರಿಂದ ತೀವ್ರ ಅಸ್ವಸ್ಥಗೊಂಡ ಈಕೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾಳೆ.

RELATED NEWS

You cannot copy contents of this page