ಬದಿಯಡ್ಕ: 22 ವರ್ಷಗಳ ನಂತರ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಲಿರುವ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಚಪ್ಪರ ಮುಹೂರ್ತ ನಿನ್ನೆ ಶಾಲಾ ವಠಾರದಲ್ಲಿ ಜರಗಿತು. ಗೋಪಾಲಕೃಷ್ಣ ಪೈ ಬದಿಯಡ್ಕ ಚಪ್ಪರ ನಿರ್ಮಾಣಕ್ಕೆ ಚಾಲನೆ ನೀಡಿದರು. ಮುಖ್ಯೋಪಾಧ್ಯಾಯಿನಿ ಶಾಹಿದಾ, ನೋಂದಾವಣಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕೆ., ಎಣ್ಮಕಜೆ ಪಂ. ಸದಸ್ಯ ಶರತ್ಚಂದ್ರ ಶೆಟ್ಟಿ, ಸಹಾಯಕ ಮುಖ್ಯೋಪಾಧ್ಯಾಯ ಉಣ್ಣಿಕೃಷ್ಣನ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಆನಂದ ಕೆ. ಮವ್ವಾರು, ಪ್ರೋಗ್ರಾಂ ಸಮಿತಿ ಸಂಚಾಲಕ ಪ್ರಭಾಕರನ್ ನಾಯರ್, ಪ್ರಚಾರ ಸಮಿತಿ ಸಂಚಾಲಕ ರಾಜೇಶ್ ಮಾಸ್ತರ್ ಅಗಲ್ಪಾಡಿ, ಅಧ್ಯಾಪಕರಾದ ನಾರಾಯಣ ಆಸ್ರ, ವಿಜಯನ್, ಯಜ್ಞೇಶ್, ಗೋಪಾಲ, ನವೀನ ಹಾಗೂ ವಿವಿಧ ಸಮಿತಿಗಳ ಸದಸ್ಯರು ಪಾಲ್ಗೊಂಡಿದ್ದರು. ಚಪ್ಪರ ಸಮಿತಿ ಸಂಚಾಲಕ ನಾರಾಯಣ ಮಾಸ್ತರ್ ಸ್ವಾಗತಿಸಿ, ಆಹಾರ ಸಮಿತಿ ಸಂಚಾಲಕ ನಿರಂಜನ ಮಾಸ್ತರ್ ವಂದಿಸಿದರು. ಕಲೋತ್ಸವ 26೬, 27, ನವಂಬರ್ 2,3,4ರಂದು ಜರಗಲಿದೆ.







