ಪುತ್ತೂರು: ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ದಶಮಾನೋ ತ್ಸವ ಕಾರ್ಯಕ್ರಮ ನಾಳೆ ಬೆಳಿಗ್ಗೆ 8.3೦ರಿಂದ ಪುತ್ತೂರು ಜೈನ ಭವನ ದಲ್ಲಿ ನಡೆಯಲಿದೆ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪ ಪ್ರಜ್ವಲನೆಗೊಳಿಸುವರು. ದ.ಕ. ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ಕೆ. ರಾಮ ಮುಗ್ರೋಡಿ ಅಧ್ಯಕ್ಷತೆ ವಹಿಸುವರು. ಟಿ. ಶ್ಯಾಮ್ ಭಟ್ ಉದ್ಘಾಟಿಸುವರು. ಜಬ್ಬಾರ್ ಸಮೊ ಸಂಪಾಜೆ ಬಣ್ಣದ ಮಾಲಿಂಗ ಸಂಸ್ಮರಣೆ ನೆರವೇರಿಸುವರು.
ಶಾಸಕ ಅಶೋಕ್ ಕುಮಾರ್ ರೈ, ನಳಿನ್ ಕುಮಾರ್ ಕಟೀಲ್, ಉದ್ಯಮಿ ಶಿವ ಶಂಕರ ನೆಕ್ರಾಜೆ ಸಹಿತ ಹಲವಾರು ಗಣ್ಯರು ಭಾಗವಹಿಸುವರು. ಶಶಿಧರ ಪಂಜ ಅವರಿಗೆ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿ ಪ್ರದಾನ ಮಾಡಲಾಗು ವುದು. ದಶಮಾನೋತ್ಸ ವದಂಗವಾಗಿ ಏರ್ಪಡಿಸಿದ ವಿಶೇಷ ಪುರಸ್ಕಾರವನ್ನು ಪೂರ್ಣಿಮಾ ಯತೀಶ್ ರೈಯ ವರಿಗೆ ಪ್ರದಾನ ಮಾಡಲಾಗುವುದು. ಯಕ್ಷಗಾನ ಪ್ರದರ್ಶನಗೊಳ್ಳಲಿದೆ.







