ಉಪ್ಪಳ: ಹೆದ್ದಾರಿ ಅಭಿವೃದ್ದಿ ಗೊಳಿಸುವ ವೇಳೆ ವಿದ್ಯುತ್ ಕಂಬ ಗಳನ್ನು ಸರ್ವೀಸ್ ರಸ್ತೆಯ ಫುಟ್ ಪಾತ್‌ನಲ್ಲಿ ಸ್ಥಾಪಿಸಲಾಗಿದ್ದು, ಇದು ಸೈಡು ನೀಡುವ ವೇಳೆ ವಾಹನಗಳಿಗೂ, ಪ್ರಯಾಣಿಕರಿಗೂ ಅಪಾಯ ಭೀತಿ ಉಂಟÁಗುತ್ತಿರುವುದಾಗಿ ದೂರ ಲಾಗಿದೆ. ಉಪ್ಪಳ ಪೇಟೆಯ ಸರ್ವೀಸ್ ರಸ್ತೆಯಲ್ಲಿರುವ ಅಂಚೆ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ ಸಮೀಪ ದಲ್ಲಿ ಹಲವಾರು ಟ್ರಾನ್ಸ್ಫಾರ್ಮರ್ ಸಹಿತ ವಿದ್ಯುತ್ ಕಂಬಗಳು ಫುಟ್‌ಪಾತ್‌ನಲ್ಲಿಯೇ ಸ್ಥಾಪಿಸಲಾಗಿದ್ದು, ಇದರಿಂದ ಪಾದಚಾರಿಗಳಿಗೆ ಸಂಚರಿ ಸಲು ಸ್ಥಳವಿಲ್ಲ. ಅಲ್ಲದೆ ಸರ್ವೀಸ್ ರಸ್ತೆಯಲ್ಲಿ ಎರಡೂ ಭಾಗದಿಂದ ವಾಹನಗಳ ಸಹಿತ ಬಸ್ ಸಂಚಾರ ವಿದ್ದು, ಈ ವೇಳೆ ಸೈಡ್ ನೀಡುವಾಗ ವಿದ್ಯುತ್ ಕಂಬದಿAದ ಭಾರೀ ಅಪಾಯ ಉಂಟಾಗುವ ಭೀತಿ ಇದೆ. ಇತ್ತೀಚೆಗೆ ಉಪ್ಪಳದಿಂದ ಬಾಯಾರು ಕಡೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿಯೋರ್ವ ಪ್ರಯಾಣಿಸುವ ವೇಳೆ ಕೈಗೆ ವಿದ್ಯುತ್ ಕಂಬ ಬಡಿದು ಮೂಳೆ ಮುರಿದ ಘಟನೆ ನಡೆದಿದೆ. ಉಪ್ಪಳ ಪೇಟೆ ಜನ ನಿಬಿಡ ಪ್ರದೇಶವಾಗಿದ್ದು, ಭಾರೀ ಸಂಖ್ಯೆಯಲ್ಲಿ ವಾಹನಗಳು ಸಂಚಾರ ನಡೆಸುತ್ತಿವೆ. ಹೆದ್ದಾರಿ ಹಾಗೂ ವಿದ್ಯುತ್ ಇಲಾಖೆ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳಬೇ ಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.






