ಕಾಸರಗೋಡು: ಮಾದಕವಸ್ತುಗಳ ವಿರುದ್ಧ ಜನರಿಗೆ ತಿಳುವಳಿಕೆ ಮೂಡಿಸುವ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜಿಲ್ಲಾ ಪೊಲೀಸ್ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆಯಿತು. ಕಾಸರಗೋಡು ಜಿಎಚ್ಎಸ್ಎಸ್, ಚೆಮ್ನಾಡ್ ಜಮಾಯತ್ ಹೈಯರ್ ಸೆಕೆಂಡರಿ ಶಾಲೆ ಹಾಗೂ ಟಿಐಎಚ್ಎಸ್ಎಸ್ ನಾಯ ಮ್ಮಾರಮೂಲೆ ಶಾಲೆಗಳ ಸ್ಟೂಡೆಂಟ್ ಪೊಲೀಸ್ನ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮಾದಕವಸ್ತುಗಳ ವಿರುದ್ಧ ಪ್ರತಿಜ್ಞೆ ಬೋಧಿಸಲಾಯಿತು. ಅಲ್ಲದೆ ಮಾದಕವಸ್ತು ಸಾಗಾಟಗಾರರನ್ನು ಸೆರೆಹಿಡಿಯುವ ಕುರಿತಾದ ಅಣಕು ಪ್ರದರ್ಶನ ನಡೆಸಲಾಯಿತು. ಅಲ್ಲದೆ ಬಸ್ಗಳಲ್ಲಿ ಮಾದಕವಸ್ತುಗಳ ವಿರುದ್ಧ ಸ್ಟಿಕ್ಕರ್ ಅಂಟಿಸಿ ಪ್ರಯಾಣಿಕರಿಗೆ ತಿಳುವಳಿಕೆ ಮೂಡಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ರಾಜ್ ಪಿ ಉದ್ಘಾಟಿಸಿದರು. ಅಡಿಶನಲ್ ಎಸ್ಪಿ ಪಿ.ಪಿ. ಕರುಣಾಕರನ್, ಎಸ್ಎಂಎಸ್ ಡಿವೈಎಸ್ಪಿ ಉತ್ತಮ್ದಾಸ್, ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಡಾ. ವಿ. ಬಾಲಕೃಷ್ಣನ್, ಸೋಶ್ಯಲ್ ಪೊಲೀಸಿಂಗ್ನ ಕಾಸರಗೋಡು ಡಿವಿಶನಲ್ ಕೋ-ಆರ್ಡಿನೇಟರ್ ರಾಮಕೃಷ್ಣನ್, ಜನಮೈತ್ರಿ ಪೊಲೀಸ್ನ ಶಶಿಧರನ್ ಪುಲ್ಲೂರು ಮೊದಲಾದವರು ನೇತೃತ್ವ ವಹಿಸಿದರು.






