ಕುಂಬಳೆ: ಮಗುವನ್ನು ನೋಡಲು ಹೋದ ತಾಯಿಗೆ ಪತಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಕೊಯಿಪ್ಪಾಡಿ ಕಡಪ್ಪುರ ನಿವಾಸಿ ಮುಹಮ್ಮದ್ ಎಂಬವರ ಪುತ್ರಿ ಸುಬೈದ (34) ಹಲ್ಲೆಗೀಡಾಗಿದ್ದು, ಈಕೆ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಳೆದ ಒಂದು ತಿಂಗಳಿಂದ ಸುಬೈದ ತಾಯಿ ಮನೆಯಲ್ಲಿದ್ದಾರೆ. ಇವರಿಗೆ ಎಂಟು ತಿಂಗಳ ಮಗು ಸಹಿತ ನಾಲ್ವರು ಮಕ್ಕಳಿದ್ದಾರೆ. ಎಂಟು ತಿಂಗಳ ಮಗುವನ್ನು ಇತ್ತೀಚೆಗೆ ಪತಿ ಮೊಗ್ರಾಲ್ ಪುತ್ತೂರು ಪಂಜತ್ತ್ ಹೌಸ್ನ ಸಲೀಂ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆನ್ನಲಾಗಿದೆ. ಇದರಿಂದ ನಿನ್ನೆ ಸಂಜೆ ಮಗುವನ್ನು ನೋಡಲೆಂದು ಹೋದ ಸುಬೈದರಿಗೆ ಪತಿ ಸಲೀಂ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಯುವತಿಯಿಂದ ಕುಂಬಳೆ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.






