ವೀಣಾ ಜೋರ್ಜ್‌ಗೆ ಹಲ್ಲೆಗೈದ ಪ್ರಕರಣ ವೈದ್ಯರುಗಳಿಂದ ಹೇಳಿಕೆ ದಾಖಲಿಸಿಕೊಂಡ ಎಸ್‌ಐಟಿ

ಕಣ್ಣೂರು: ಮಾಜಿ ಸಚಿವೆ ವೀಣಾ ಜೋರ್ಜ್‌ರಿಗೆ ಕೆಎಸ್‌ಯು ಕಾರ್ಯ ಕರ್ತರು ಹಲ್ಲೆಗೈದರೆಂಬ ಪ್ರಕರಣದಲ್ಲಿ ಪ್ರತ್ಯೇಕ ತನಿಖಾ ತಂಡ ಪರಿಯಾರಂ ಮೆಡಿಕಲ್ ಕಾಲೇಜಿನ ವೈದ್ಯರುಗಳಿಂದ  ಹೇಳಿಕೆ ದಾಖಲಿಸಿಕೊಂಡಿದೆ.  ಹೊರಗೆ ಕಾಣತಕ್ಕ ಗಾಯ ವೀಣಾ ಜೋರ್ಜ್‌ಗೆ ಉಂಟಾಗಿರಲಿಲ್ಲವೆಂದು ವೈದ್ಯರು ಹೇಳಿಕೆ ನೀಡಿರುವುದಾಗಿ ಹೇಳಲಾಗುತ್ತಿದೆ. ವೀಣಾರನ್ನು  ತುರ್ತು ನಿಗಾ ಘಟಕದಲ್ಲಿ ದಾಖಲಿಸಿರುವುದು ಕುತ್ತಿಗೆಯಲ್ಲಿ  ಬಾತುಕೊಂಡ ಸ್ಥಿತಿಯಲ್ಲಿದ್ದುದರಿಂದ ಎಂಬುದಾಗಿ ವೈದ್ಯರು ಎಸ್‌ಐಟಿಗೆ ತಿಳಿಸಿದ್ದಾರೆ. ಆಸ್ಪತ್ರೆಯಿಂದ  ವೈದ್ಯಕೀಯ ದಾಖಲೆಗಳನ್ನು ಅಧಿಕಾರಿಗಳು ಸಂಗ್ರಹಿಸಿಕೊಂಡಿದ್ದಾರೆ. ಇದೇ ವೇಳೆ ಈ ಪ್ರಕರಣದಲ್ಲಿ ತಪ್ಪಾಗಿ ಹೇಳಿಕೆ ನೀಡಿದ ವೀಣಾ ಜೋರ್ಜ್‌ರ ಮಾಜಿ ಅಂಗರಕ್ಷ ಕನ ವಿರುದ್ಧ ಎಸ್‌ಐಟಿ ಡಿಜಿಪಿಗೆ ಶೀಘ್ರ ವರದಿ ಸಲ್ಲಿಸಲಿದೆ. ಕೆಎಸ್‌ಯು ಕಾರ್ಯಕರ್ತರು ಆಯುಧ ಬಳಸಿ ಹಲ್ಲೆಗೈದರೆಂದು  ವೀಣಾರ ನಿರ್ದೇಶ ಪ್ರಕಾರ ಹೇಳಿಕೆ ನೀಡಿರುವುದಾಗಿ ಈಹಿಂದೆ  ಅಂಗರಕ್ಷಕನಾಗಿದ್ದ ಅಭಿಲಾಷ್ ಪೊಲೀಸರಲ್ಲಿ ತಿಳಿಸಿದ್ದರು. ಈ ಹೇಳಿಕೆಯ ಆಧಾರದಲ್ಲಿ ಕೆಎಸ್‌ಯು ಕಾರ್ಯಕರ್ತರ ವಿರುದ್ಧ  ಹತ್ಯೆಯತ್ನ ಸಹಿತ ಕಾಯ್ದೆಗಳ ಪ್ರಕಾರ ಕೇಸು ದಾಖಲಿಸಲಾಗಿತ್ತು.

೨೦೨೬ ಫೆಬ್ರವರಿ ೨೫ರಂದು ಕಣ್ಣೂರು ರೈಲ್ವೇ ನಿಲ್ದಾಣದಲ್ಲಿ ವೀಣಾ ಜೋರ್ಜ್ ವಿರುದ್ಧ ಕೆಎಸ್‌ಯು ಕಾರ್ಯಕರ್ತರು ಕಪ್ಪು ಪತಾಕೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ಮಧ್ಯೆ  ವೀಣಾ ಜೋರ್ಜ್  ಗಾಯಗೊಂಡಿದ್ದರೆಂದು ಆರೋಪಿಸಿದ ಹಿನ್ನೆಲೆಯಲ್ಲಿ ಎಂ.ಸಿ.ಅತುಲ್, ವಿ.ವಿ.ಅಕ್ಷಯ್, ಬಿತುಲ್ ಬಾಲನ್, ಸಿ.ಎಚ್. ಮುಬಾಸ್, ಅಹಮ್ಮದ್ ಯಾಸಿನ್ ಎಂಬಿವರ ವಿರುದ್ಧ  ಹತ್ಯೆಯತ್ನ ಸಹಿತ ಕಾಯ್ದೆಗಳ ಪ್ರಕಾರ ರೈಲ್ವೇ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.   ಕಣ್ಣೂರು ಸಬ್ ಜೈಲಿನಲ್ಲಿ ೧೬ ದಿನಗಳ ಕಾಲ ರಿಮಾಂಡ್‌ನಲ್ಲಿದ್ದ ಬಳಿಕ ಇವರಿಗೆ ಜಾಮೀನು ಲಭಿಸಿತ್ತು.

RELATED NEWS

You cannot copy contents of this page