ಮಾಯಾ ಟ್ರೇಡರ್ಸ್‌ನಲ್ಲಿ ಪಟಾಕಿ ಖರೀದಿಗೆ ಹೊಸ ಮೆರುಗು

ಮಂಗಳೂರು: ಈ ದೀಪಾವಳಿ ಸಂದರ್ಭದಲ್ಲಿ ಮಂಗಳೂರು ಮಾಯಾ ಟ್ರೇಡರ್ಸ್ ಇನ್ನಷ್ಟು ಹೆಚ್ಚು ವೈವಿಧ್ಯತೆಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಸಂಪೂರ್ಣ ಹವಾನಿಯಂತ್ರಿತ ಶೋರೂಂನಲ್ಲಿ ವಿಶಾಲ ಶ್ರೇಣಿಯ ಪಟಾಕಿಗಳನ್ನು ಆಯ್ಕೆ ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅತ್ಯಾಕರ್ಷಕ ಬೆಲೆಯಲ್ಲಿ  ‘ವೀಟೂ’ ಪಟಾಕಿಗಳನ್ನು, ಗಿಫ್ಟ್ ಬಾಕ್ಸ್‌ಗಳು ಗ್ರಾಹಕರಿಗೆ ಲಭ್ಯವಿದೆ. ವೃತ್ತಿಪರ ಸಿಬ್ಬಂದಿ ಪಟಾಕಿಗಳ ಆಯ್ಕೆಗೆ ಮಾರ್ಗದರ್ಶನ ನೀಡುವರು. ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಈ ತಿಂಗಳ ೨೧ರಿಂದ ೩೧ರ ವರೆಗೆ ಪಟಾಕಿಗಳ ಮೇಲೆ ಶೇ.೫೦ರಷ್ಟು ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ಜೊತೆಗೆ ಮಕ್ಕಳಿಗೆ ಖರೀದಿಯ ಮೇಲೆ ಉಚಿತವಾಗಿ ‘ಮೂನ್‌ಗಾಗಲ್ಸ್’ ದೊರೆಯಲಿದ್ದು, ಇದು ಗ್ರಾಹಕರಿಗೆ ಇನ್ನಷ್ಟು ಆಕರ್ಷಣೀಯವೆನಿಸಲಿದೆ. ಭಾನುವಾರವೂ ಶೋರೂಂ ತೆರೆದಿರುತ್ತದೆ. ಹೊಸ ತರದ ಶಾಪಿಂಗ್ ಅನುಭವವನ್ನು ಪಡೆಯಲು ಬಂದರು ಲಕ್ಷ್ಮಣ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿರುವ ಮಾಯಾ ಟ್ರೇಡರ್ಸ್‌ನ್ನು ಸಂಪರ್ಕಿಸಬಹುದೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED NEWS

You cannot copy contents of this page