ಮುಳಿಯಾರು: ಮುಳಿಯಾರು ಪಂಚಾಯತ್ ಅಧ್ಯಕ್ಷರ ನಿಷೇಧವಿ ದ್ದರೂ ಆರ್‌ಎಸ್‌ಎಸ್ ಕಾರ್ಯ ಕರ್ತರು ಪಥಸಂಚಲನ ನಡೆಸಿದರು. ಕಾರ್ಯಕ್ರಮಕ್ಕೆ ಆಗ್ರಹಿಸಿದ್ದ ಪಂಚಾಯತ್ ಮೈದಾನದಲ್ಲಿ ಕಾರ್ಯಕ್ರಮಕ್ಕೆ ನಡೆಸುವುದಕ್ಕೆ ಅನುಮತಿ ನಿಷೇಧಿಸಲಾಗಿದ್ದರೂ ಆರ್‌ಎಸ್‌ಎಸ್ ಕಾರ್ಯಕರ್ತರು ಪಂಚಾಯತ್ ಕಚೇರಿ ಪರಿಸರದಲ್ಲಿ ಕಾರ್ಯಕ್ರಮ ನಡೆಸಿದರು. ಕಾರ್ಯಕ್ರಮದ ಒಂದು ದಿನದ ಮುಂಚಿತ ಮೈದಾನದಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಪಂಚಾಯತ್ ಅಧ್ಯಕ್ಷ ನಿಷೇಧ ಹೇರಿದ್ದರು.
ಆರ್‌ಎಸ್‌ಎಸ್ ಕಾರ್ಯಕ್ರಮ ಕ್ಕಾಗಿ ಪಂಚಾಯತ್ ಅಧ್ಯಕ್ಷ ಮೈದಾ ನವನ್ನು ಮಂಜೂರು ಮಾಡಿರುವುದಾಗಿ ಆರೋಪಿಸಿ ಕೆಲವು ಯೂತ್‌ಲೀಗ್ ಕಾರ್ಯಕರ್ತರು ವಾಟ್ಸಪ್‌ಗಳಲ್ಲಿ ಪ್ರಚೋದನಕಾರಿ ಪರಾಮರ್ಶೆಗಳನ್ನು ನಡೆಸಿದ್ದರು. ಇದರಲ್ಲಿ ಲೀಗ್ ಮುಖಂಡನಾದ ಪಂಚಾಯತ್ ಅಧ್ಯಕ್ಷರ ವಿರುದ್ಧವೂ ಟೀಕೆ ವ್ಯಕ್ತಪಡಿಸಲಾಗಿತ್ತು.
ಚಿಪ್ಲಿಕಯ ಭಜನಾ ಮಂದಿರ ಪರಿಸರದಿಂದ ಆರಂಭಿಸಿದ ಪಥಸಂಚಲನ ಮುಳಿಯಾರು ಪಂಚಾಯತ್ ಕಚೇರಿ ಪರಿಸರದಲ್ಲಿ ಸಮಾಪ್ತಿಗೊಂಡಿತು. ಬಳಿಕ ಅಲ್ಲೇ ಸಮಾರೋಪ ಕಾರ್ಯಕ್ರಮವನ್ನು ನಡೆಸಲಾಗಿದ್ದು, ಕಣ್ಣೂರು ವಿಭಾಗ ಸಹ ಸಂಪರ್ಕ ಪ್ರಮುಖ್ ಪಿ.ವಿ. ಲಿಜೇಶ್ ಬೌದ್ದಿಕ್ ನಡೆಸಿದರು. ಪ್ರಭಾಕರನ್, ಖಂಡ್ ವ್ಯವಸ್ಥಾ ಪ್ರಮುಖ್ ವೇಣುಗೋಪಾಲ್, ನಿದಿನ್ ಕುಮಾರ್ ಭಾಗವಹಿಸಿದರು.







