ಕುಂಬಳೆ: ಗೂಡಿಗೆ ನುಗ್ಗಿ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದ ಬೀದಿ ನಾಯಿಗಳಿಗೆ ಅದು ಸಿಗದಾದಾಗ ಪತ್ರಿಕೆ ಕಟ್ಟಗಳನ್ನು ಕಚ್ಚಿ ಚೂರು ಚೂರು ಮಾಡಿ ಬಿಸಾಡಿದ ಘಟನೆ ನಡೆದಿದೆ. ಕುಂಬಳೆ ಪಂಚಾಯತ್ನ ಮೊಗ್ರಾಲ್ ಹಾಗೂ ಪರಿಸರ ಪ್ರದೇಶಗಳಲ್ಲಿ ನಾಮಮಾತ್ರವಾಗಿ ಮಾರಾಟವಾಗುತ್ತಿರುವ ಪತ್ರಿಕೆಗಳನ್ನು ಬೀದಿ ನಾಯಿಗಳು ನಾಶಪಡಿಸಿವೆ.
ನಿನ್ನೆ ಬೆಳಿಗ್ಗೆ ಮೊಗ್ರಾಲ್ಗೆ ತಲುಪಿದ ಮೀನು ಕಾರ್ಮಿಕ ಪತ್ರಿಕೆಗಳನ್ನು ಹರಿದು ಬಿಸಾಡುತ್ತಿರುವ ಬೀದಿ ನಾಯಿಗಳನ್ನು ಕಂಡಿದ್ದಾರೆ. ಜನರಿಗೆ ಹಾಗೂ ಊರಿಗೆ ಸವಾಲೆನ್ನೆಸೆದು ಬೆದರಿಕೆ ಸೃಷ್ಟಿಸುವ ಬೀದಿ ನಾಯಿಗಳನ್ನು ಇನ್ನು ಈ ರೀತಿಯಲ್ಲಿ ಮುಂದುವರಿಯಲು ಬಿಟ್ಟಿರುವುದು ಯಾಕೆ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ. ಬೀದಿ ನಾಯಿಗಳನ್ನು ಕೂಡಿಹಾಕಲು ಶೆಲ್ಟರ್ಗಳನ್ನು ನಿರ್ಮಿಸಲಾಗುವುದೆಂದು ಪಂಚಾಯತ್ ಅಧಿಕಾರಿಗಳು ಘೋಷಿಸಿದ್ದರು. ಅದಕ್ಕೆ ಚಾಲನೆ ನೀಡಿ ಜನವಾಸ ಕೇಂದ್ರದಲ್ಲೇ ಪ್ರಥಮ ಶೆಲ್ಟರ್ ಸ್ಥಾಪಿಸಲು ಪ್ರಯತ್ನಿಸಲಾಗಿತ್ತು. ಆದರೆ ಜನವಾಸ ಕೇಂದ್ರದಲ್ಲೇ ಸ್ಥಾಪಿಸುವ ಈ ಶೆಲ್ಟರ್ ವಿರುದ್ಧ ಜನರು ಪ್ರತಿಭಟಿಸುವರೆಂದು ಪಂಚಾಯತ್ ತಿಳಿದುಕೊಂಡು ಅದನ್ನು ಅರ್ಧದಲ್ಲೇ ಕೈಬಿಟ್ಟಿರುವುದಾಗಿಯೂ ಹೇಳಲಾಗುತ್ತಿದೆ.







