ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ

ಮಂಜೇಶ್ವರ: ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಜನವರಿ 6ರಿಂದ 16ರವರೆಗೆ ನಡೆಯಲಿದ್ದು, ಇದರ ಪೂರ್ವಭಾವಿ ಬ್ರಹ್ಮಕಲಶೋತ್ಸವ ಸಮಿತಿ ಸಭೆ ದೇವಸ್ಥಾನದ ವಠಾರದಲ್ಲಿ ಜರಗಿತು. ಡಾ. ಜಯಪಾಲ ಶೆಟ್ಟಿ ಮಾಡ ಅಧ್ಯಕ್ಷತೆ ವಹಿಸಿದ್ದು, ಗೋಪಾಲಕೃಷ್ಣ ತಂತ್ರಿ, ವಿಘ್ನೇಶ್ ತಂತ್ರಿ ಮಾರ್ಗದರ್ಶನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಾದವ ಬಡಾಜೆ ಬ್ರಹ್ಮಕಲಶೋತ್ಸವದ ಪೂರ್ವಸಿದ್ಧತೆ ಹಾಗೂ ಉತ್ಸವವನ್ನು ಯಶಸ್ವಿಯಾಗಿ ನಡೆಸುವ ಕುರಿತು ಮಾಹಿತಿ ನೀಡಿದರು.

ಆಡಳಿತ ಮೊಕ್ತೇಸರ ಬಲರಾಮ ಭಟ್ ಕಾಕುಂಜೆ, ಮೊಕ್ತೇಸರ ಶೈಲೇಶ್ ಎಸ್ ಸ್ಪೂರ್ತಿನಗರ ಮಾತನಾಡಿದರು. ಪದ್ಮನಾಭ ಕಡಪ್ಪುರ, ಗೋಪಾಲ ಶೆಟ್ಟಿ ಅರಿಬೈಲು, ಹರೀಶ್ ಶೆಟ್ಟಿ ಮಾಡ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಂಕರ ಪಡುಬೈಲು, ಮೊಕ್ತೇಸರ ರಾಮಚಂದ್ರ ಸುರಿಬೈಲು, ಸುಕೇಶ್ ಆಳ್ವ, ಉಪಾಧ್ಯಕ್ಷ ಕಿರಣ್ ಶೆಟ್ಟಿ ಮಾಡ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಹಿತ್ ಸ್ಪೂರ್ತಿನಗರ, ಚಂದ್ರಮೋಹನ್ ಹೊಳ್ಳ ಸಹಿತ ಹಲವರು ಭಾಗವಹಿಸಿದರು.

RELATED NEWS

You cannot copy contents of this page