ಕುಂಬಳೆ: ಭೂಮಿಯ ಹಕ್ಕುಪತ್ರ ಲಭಿಸಿದ ಹಿನ್ನೆಲೆಯಲ್ಲಿ ತೆರಿಗೆ ಪಾವತಿಸಿ ದರೂ ಮಂಜೂರು ಮಾಡಿದ ಭೂಮಿ ಎಲ್ಲಿದೆಯೆಂದು ಪತ್ತೆಹಚ್ಚಲಾಗ ದುದರಿಂದ ಹೋರಾಟಕ್ಕಿಳಿದ ಕುಂಬಳೆ ನಿವಾಸಿ ಇರ್ಷಾದ್ ಚಾಕೊ ಎಂಬವರಿಗೆ ಅಧಿಕಾರಿಗಳು ಸ್ಥಳ ತೋರಿಸಿ ಕೊಟ್ಟಿದ್ದಾರೆ. ಕಾರವಲ್ ವರದಿಯ ಹಿನ್ನೆಲೆಯಲ್ಲಿ ಎಡಿಎಂ ಮಧ್ಯಪ್ರವೇಶಿಸಿ ಈ ಕ್ರಮ ಕೈಗೊಂಡಿದ್ದಾರೆ. ಬಳಿಕ ತಹಶೀಲ್ದಾರ್‌ರ ನಿರ್ದೇಶ ಪ್ರಕಾರ ಕೊಯಿಪ್ಪಾಡಿ ಗ್ರಾಮ ಕಚೇರಿ ಅಧಿಕಾರಿಗಳು ಸ್ಥಳ ಅಳತೆ ಮಾಡಿ ನೀಡಿದ್ದಾರೆ. ನಿನ್ನೆ ಸ್ಥಳ ಅಳತೆ ಮಾಡಿ ವರದಿ ಸಲ್ಲಿಸಬೇಕೆಂಬ ಎಡಿಎಂರ ನಿರ್ದೇಶದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಕೊಯಿಪ್ಪಾಡಿ ಗ್ರಾಮದಲ್ಲಿ ಕಾನ್ಸಾ ಕಾಲೇಜಿನ ಸಮೀಪ ಇರ್ಷಾದ್‌ರಿಗೆ ಸ್ಥಳ ಮಂಜೂರು ಮಾಡಲಾಗಿತ್ತು. ಪಟ್ಟಾ ಲಭಿಸುವುದರೊಂದಿಗೆ ಈ ಭೂಮಿಗೆ ತೆರಿಗೆ ಪಾವತಿಸಿದರೂ ಆ ಸ್ಥಳ ಎಲ್ಲಿದೆಯೆಂದು ಅಧಿಕಾರಿಗಳು ತೋರಿಸಿಕೊಟ್ಟಿ ರಲಿಲ್ಲ. ಇದಕ್ಕಾಗಿ ಹಲವು ಬಾರಿ ಇರ್ಷಾದ್ ಕಂದಾಯ ಕಚೇರಿಗಳನ್ನು ಸಮೀಪಿಸಿದ್ದರೂ ಸೂಕ್ತ ಕ್ರಮ ಅಧಿಕಾರಿಗಳ ಭಾಗದಿಂದ ಉಂಟಾಗಿಲ್ಲ. ಮೂರು ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ತಾಲೂಕು, ಗ್ರಾಮ ಕಚೇರಿಗಳ ಮುಂದೆ ಚಳವಳಿ ನಡೆಸುವುದಾಗಿ ಇರ್ಷಾದ್ ಅಧಿಕಾರಿಗಳಿಗೆ ಮುನ್ಸೂಚನೆ ನೀಡಿದ್ದರು. ಇರ್ಷಾದ್ ಚಾಕೋರ ಈ ಸಮಸ್ಯೆಯ ಕುರಿತು ಕಾರವಲ್ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಅಧಿಕಾರಿಗಳು ಮಧ್ಯಪ್ರವೇಶಿಸಿ ಸ್ಥಳ ಅಳೆದು ನೀಡಿದ್ದಾರೆ.







