ಕಾಸರಗೋಡು: ಕಟ್ಟಡದ ಮೇಲೆ ಸೌರ ಪ್ಯಾನಲ್ ಅಳವಡಿಸುತ್ತಿದ್ದ ವೇಳೆ ಕೆಳಕ್ಕೆ ಬಿದ್ದು ಯುವಕ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಕಲ್ಲಿಕೋಟೆ ಮುಕ್ಕದ ಕೂಡಾರತ್ತಿ ನಿವಾಸಿ ಪಿ.ಎ. ಫೈಸಲ್ (38) ಸಾವನ್ನಪ್ಪಿದ ದುರ್ದೈವಿ. ಇವರು ನಿನ್ನೆ ಪಡನ್ನ ಗಣೇಶ್ಮುಖ್ ಎಂಬಲ್ಲಿನ ಖಾಸಗಿ ಕಟ್ಟಡದ ಮೇಲೆ ಸೋಲಾರ್ ಪ್ಯಾನಲ್ಗಳನ್ನು ಸ್ಥಾಪಿಸುತ್ತಿದ್ದ ವೇಳೆ ಕಟ್ಟಡದ ಮೇಲೆ ಹಾಕಲಾಗಿದ್ದ ಪಿಪಿಸಿ ಶೀಟ್ನ ಮೇಲೆ ಕಾಲಿರಿಸಿದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡರು. ತಕ್ಷಣ ಅವರನ್ನು ಆಸತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.
ದಿ| ಚಾತನಾಚಿರ ಅಲಿ-ಪಿ.ಎ. ಕುಂಞಾಮಿನ ದಂಪತಿ ಪುತ್ರನಾಗಿರುವ ಮೃತರು ಪತ್ನಿ ಶಫ್ನ, ಮಕ್ಕಳದ ಆಯಿಷಾ ನಜ್ಮಿ, ಸಯಾನ್ ಅಲಿ, ಸಹೋದರ-ಸಹೋದರಿಯರಾದ ಪಿ.ಎ. ಸುಲೈಖಾ, ಶಬೀರ್, ಖದೀಜಾ, ಮುಸ್ತಫಾ, ಮೈಮೂನಾ, ಸುಹಾನಾ, ತಸ್ಲೀನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






