ಜ್ಯುವೆಲ್ಲರಿ  ಮಾಲಕ ನಿಧನ

ಕಾಸರಗೋಡು : ಬಟ್ಟಂಪಾರೆ ಶ್ರೀ ಕೃಷ್ಣ ಟಾಕೀಸ್ ಬಳಿಯ ನಿವಾಸಿ, ಹಿರಿಯ ಗುರುಸ್ವಾಮಿ, ಜ್ಯುವೆಲ್ಲರಿ ಮಾಲಕ ಕೆ. ವಿ ಪ್ರಭಾಕರ ಆಚಾರ್ಯ ಪೆರ್ಣೆ (75) ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸೂರ್ಲು ನ ಉಷಾ ಚಂದ್ರ ಜ್ಯುವೆಲ್ಲರಿ ಮಾಲಕರಾಗಿದ್ದರು. ಗುರುಸ್ವಾಮಿ ಯಾದ ಇವರು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಬಳಿಯ ಶ್ರೀ ಅಯ್ಯಪ್ಪ ಮಂದಿರ, ಕರಂದಕ್ಕಾಡ್ ಶ್ರೀ ವೀರ ಹನುಮಾನ್ ವ್ಯಾಯಾಮ ಶಾಲೆಯಲ್ಲಿ ನೂರಾರು ಮಂದಿಗೆ ಮಾಲಾಧಾರಣೆ ಮಾಡಿದ್ದರು.
ಮೃತರು ಪತ್ನಿ ಹೇಮಾವತಿ, ಮಕ್ಕಳಾದ ಚಕ್ರೇಶ್ ಆಚಾರ್ಯ, ಉಷಾ ಚ೦ದ್ರ, ಲಕ್ಷ್ಮೀಶ ಆಚಾರ್ಯ, ಭವ್ಯ ಚಂದ್ರ, ಅಳಿಯಂದಿರಾದ ಮನೋಜ್ ಆಚಾರ್ಯ, ಭುವನೇಶ ಆಚಾರ್ಯ, ಸೊಸೆಯಂದಿರಾದ ನಿವೇದಿತ, ನವ್ಯ ಶ್ರೀ, ಸಹೋದರ ಅನಂತ ಪದ್ಮನಾಭ ಆಚಾರ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

RELATED NEWS

You cannot copy contents of this page