ಬಿದ್ದು ಸಿಕ್ಕಿದ ಒಂದು ಪವನ್ ಚಿನ್ನಾಭರಣ ವಾರಸುದಾರರಿಗೆ ಹಸ್ತಾಂತರಿಸಿ ಮಾದರಿಯಾದ ವಿದ್ಯಾರ್ಥಿನಿ

ಸೀತಾಂಗೋಳಿ: ಬಿದ್ದು ಸಿಕ್ಕಿದ ಒಂದು ಪವನ್ ತೂಕದ ಚಿನ್ನದ ಬ್ರೇಸ್‌ಲೆಟ್ ಅದರ ವಾರಸುದಾರರಿಗೆ ಹಸ್ತಾಂತರಿಸಿ ಕಾಲೇಜು ವಿದ್ಯಾರ್ಥಿನಿ ಮಾದರಿಯಾಗಿದ್ದಾಳೆ. ಸೀತಾಂಗೋಳಿ ಮಾಲಿಕ್ ದೀನಾರ್ ಕಾಲೇಜಿನ ವಿದ್ಯಾರ್ಥಿನಿಯೂ ಕಾಸರಗೋಡು ತೆರುವತ್ತ್ ಅಡ್ಕತ್ತುವಳಪ್ಪಿನ ಶಂಸುದ್ದೀನ್ ಎಂಬವರ ಪುತ್ರಿ ರುಖಿಯತ್ ಸೌಸನ್ ಸಲವಿಯ ಮಾದರಿಯಾಗಿದ್ದಾರ. ಮೊನ್ನೆ ಸಂಜೆ  ಸೀತಾಂಗೋಳಿ ಪೇಟೆಯಲ್ಲಿ ವಿದ್ಯಾರ್ಥಿನಿಗೆ ಒಂದು ಪವನ್ ತೂಕದ ಬ್ರೇಸ್‌ಲೆಟ್ ಬಿದ್ದು ಸಿಕ್ಕಿತ್ತು.  ಈ ಬಗ್ಗೆ ಆಕೆ ಸೀತಾಂಗೋಳಿ ಪೇಟೆ ಯಲ್ಲಿರುವ  ಪೊಲೀಸ್ ಸಹಾಯ ಕೇಂದ್ರದಲ್ಲಿ ತಿಳಿಸಿ ಬಳಿಕ ಕುಂಬಳೆ ಪೊಲೀಸ್ ಠಾಣೆಗೆ ತಲುಪಿ ಎಸ್.ಐ ಎಸ್.ಅನೂಪ್‌ರಿಗೆ ಹಸ್ತಾಂತರಿಸಿ ದ್ದರ. ಈ ಮಧ್ಯೆ ಪೆರ್ಲ ಬೆದ್ರಂಪಳ್ಳದ ಮುಹಮ್ಮದ್ ಶರೀಫ್ ತನ್ನ ಮಗಳ ಚಿನ್ನದ ಬ್ರೇಸ್‌ಲೆಟ್ ಪ್ರಯಾಣ ವೇಳೆ ಕಳೆದುಹೋಗಿರುವು ದಾಗಿ ತಿಳಿಸಿ ಸೀತಾಂಗೋಳಿಯ ಪೊಲೀಸ್ ಸಹಾಯ ಕೇಂದ್ರಕ್ಕೆ ತಲುಪಿದ್ದರು. ಈ ವೇಳೆ ಚಿನ್ನ ಬಿದ್ದು ಸಿಕ್ಕಿದ ವಿದ್ಯಾರ್ಥಿನಿ ಅದನ್ನು ಕುಂಬಳೆ ಪೊಲೀಸ್ ಠಾಣೆಗೆ ತಲುಪಿಸಿರುವುದಾಗಿ  ಸಹಾಯ ಕೇಂದ್ರದ ಪೊಲೀಸರು ತಿಳಿಸಿದ್ದರು.ಇದರಂತೆ ಮುಹಮ್ಮದ್ ಶರೀಫ್ ಕುಂಬಳ ಪೊಲೀಸ್ ಠಾಣೆಗೆ ತಲುಪಿದ್ದರು. ಬಳಿಕ ಚಿನ್ನಾಭರಣವನ್ನು ಪೊಲೀಸರ ಉಪಸ್ಥಿತಿಯಲ್ಲಿ  ರುಖಿಯತ್ ಸೌಸನ್ ಸಲವಿಯ ಅದರ ವಾರಸುದಾರರಿಗೆ ಹಸ್ತಾಂತರಿಸಿದರು. ೧.೨೫ ಲಕ್ಷ ರೂ. ಮೌಲ್ಯದ ಚಿನ್ನಾಭರ ಣವನ್ನು ಪೊಲೀಸ್ ಠಾಣೆಗೆ ತಲುಪಿಸಿ ಮಾದರಿಯಾದ ವಿದ್ಯಾರ್ಥಿನಿಯನ್ನು ಪೊಲೀಸರು ಹಾಗೂ ಸಹಪಾಠಿಗಳು ಅಭಿನಂದಿಸಿದ್ದಾರೆ.

RELATED NEWS

You cannot copy contents of this page