ಬಿಜೆಪಿಯಿಂದ ಕೂಡ್ಲುನಲ್ಲಿ ಅಶೋಕ್ ಶೆಟ್ಟಿ ಸಂಸ್ಮರಣೆ

ಕಾಸರಗೋಡು: ಬಿಜೆಪಿ ಸಕ್ರಿಯ ಕಾರ್ಯಕರ್ತ ಅಶೋಕ್ ಶೆಟ್ಟಿ ರಾಜಕೀಯ ವಿರೋಧಿಗಳ ಆಕ್ರಮಣಕ್ಕೆ ಬಲಿಯಾಗಿ 3೦ ವರ್ಷ ಸಂದಿದ್ದು, ಇಂತಹ ಯುವಕರ ದೃಢತೆ ಬಿಜೆಪಿಯನ್ನು ರಾಮದಾಸ್ ನಗರದಲ್ಲಿ ಬಲಿಷ್ಠಗೊಳಿಸಲು ಕಾರಣವಾಯಿತೆಂದು ಬಿಜೆಪಿ ಹಿರಿಯ ಕಾರ್ಯಕರ್ತ ಕೆ. ವಿಠಲ ಶೆಟ್ಟಿ ನುಡಿದರು. ಬಲಿದಾನಿ ಅಶೋಕ್ ಶೆಟ್ಟಿಯವರ 3೦ನೇ ವರ್ಷದ ಸಂಸ್ಮರಣೆ ಪ್ರಯುಕ್ತ ಕೂಡ್ಲು ರಾಮದಾಸ್ ನಗರದ ಬಿಜೆಪಿ ಸಮಿತಿ ಕಾರ್ಯಾಲಯದಲ್ಲಿ ಜರಗಿದ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಮಧೂರು ಪಂಚಾಯತ್ ಈಸ್ಟ್ ಸಮಿತಿ ಅಧ್ಯಕ್ಷ ಮಹೇಶ್ ಮಧೂರು ಅಧ್ಯಕ್ಷತೆ ವಹಿಸಿದರು. ಕೆ. ಮಹಾಬಲ ರೈ, ಸುಕುಮಾರ ಕುದ್ರೆಪ್ಪಾಡಿ, ರವೀಂದ್ರ ರೈ ಸಿರಿಬಾಗಿಲು, ಮಾಧವ ಮಾಸ್ತರ್ ಮಾತನಾಡಿದರು. ಮಧೂರು ಪಂ. ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್, ಪಂ.ಮಾಜಿ  ಅಧ್ಯಕ್ಷ ಕೆ. ಗೋಪಾಲಕೃಷ್ಣ, ಪುಷ್ಪಾ ಗೋಪಾಲನ್, ಮುರಳಿ ಕುಮಾರ್, ಅಶೋಕ್ ನಾಯಕ್, ಅನಿಲ್ ಉಪಸ್ಥಿತರಿದ್ದರು. ಗಣೇಶ್ ಮೀಪುಗುರಿ ಸ್ವಾಗತಿಸಿ, ಶಶಿಕುಮಾರ್ ವಂದಿಸಿದರು.

RELATED NEWS

You cannot copy contents of this page