‘ಆಪರೇಷನ್ ತೆಳಿಮ’: ಕಾನೂನು ಉಲ್ಲಂಘನೆ ಪತ್ತೆಹಚ್ಚಿದ ಚೆರ್ಕಳ, ಮೇಲ್ಪರಂಬದ 5 ಸಂಸ್ಥೆಗಳ ಮುಚ್ಚುಗಡೆ

ಕಾಸರಗೋಡು: ಆಹಾರ ಸುರಕ್ಷತೆ ತಪಾಸಣೆಯಲ್ಲಿ ಕಾನೂನು ಉಲ್ಲಂಘನೆ ಪತ್ತೆಹಚ್ಚಿದ ಚೆರ್ಕಳದ ಹಾಗೂ ಮೇಲ್ಪರಂಬದ ಐದು ಸಂಸ್ಥೆಗಳನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಎರಡು ಸಂಸ್ಥೆಗಳ ಪರವಾನಗಿಯನ್ನು ಹಾಗೂ ಮೂರು ಸಂಸ್ಥೆಗಳ ನೋಂದಾವಣೆಯನ್ನು ಅಮಾನತುಗೊಳಿಸಲಾ ಗಿದೆ. ಕರಿದ ತಿಂಡಿಗಳನ್ನು ನಿರ್ಮಿಸುವ ನಿರ್ಮಾಣ ಘಟಕಗಳಲ್ಲಾಗಿದೆ ಆಹಾರ ಸುರಕ್ಷಾ ಇಲಾಖೆ ತಪಾಸಣೆ ನಡೆಸಿರುವುದು. ಆಪರೇಷನ್ ತೆಳಿಮ 2.0 ಎಂಬ ಹೆಸರಲ್ಲಿ ರಾಜ್ಯವ್ಯಾಪಕವಾಗಿ ನಡೆಸುವ ತಪಾಸಣೆಗಳ ಅಂಗವಾಗಿ ಜಿಲ್ಲೆಯಲ್ಲಿ ಎರಡು ತಂಡವನ್ನು ರೂಪೀಕರಿಸಿ ತಪಾಸಣೆ ನಡೆಸಲಾಗಿದೆ. ಮೇಲ್ಪರಂಬ, ಚೆರ್ಕಳ ಭಾಗಗಳ ನಿರ್ಮಾಣ ಘಟಕಗಳಲ್ಲಿ ತಪಾಸಣೆ ನಡೆಸಲಾಗಿದೆ.  ಹಾನಿಕಾರಕವಾದ ರೀತಿಯಲ್ಲಿ ಪತ್ತೆಹಚ್ಚಿದ 39 ಲೀಟರ್ ಅಡುಗೆ ಎಣ್ಣೆ, 200 ಸಮೋಸಗಳು, 35 ಕಿಲೋ ಗ್ರಾಂ ಕರಿದ ತಿಂಡಿಗಳನ್ನು ನಾಶಪಡಿಸಲಾಯಿತು. ಕಾನೂನು ಉಲ್ಲಂಘನೆಗಳನ್ನು ಪತ್ತೆಹಚ್ಚಿದ ಸಂಸ್ಥೆಗಳ ವಿರುದ್ಧ ಆಹಾರ ಭದ್ರತಾ ನಿಯಮ ಪ್ರಕಾರ ಕ್ರಮ ಸ್ವೀಕರಿಸುವುದಾಗಿ ಆಹಾರ ಇಲಾಖೆ ಅಸಿಸ್ಟೆಂಟ್ ಕಮಿಶನರ್ ಎಸ್. ಸಂಗೀತ್ ತಿಳಿಸಿದ್ದಾರೆ.

RELATED NEWS

You cannot copy contents of this page