ಹೊಸದುರ್ಗ: ಪುಲ್ಲೂರು ಶ್ರೀ ವಿಷ್ಣುಮೂರ್ತಿ ಕ್ಷೇತ್ರದಿಂದ ಕಳವು ನಡೆಸಲಾಗಿದೆ. ಭಂಡಾರವನ್ನು ಮುರಿದು ಅದರಲ್ಲಿದ್ದ ಅಂದಾಜು 15,000 ರೂ. ಕಳವು ನಡೆಸಲಾಗಿದೆ. ನಿನ್ನೆ ಮುಂಜಾನೆ ಕಳವು ಗಮನಕ್ಕೆ ಬಂದಿದೆ. ಕ್ಷೇತ್ರದ ಗೇಟ್ನ ಬೀಗ ಮುರಿದು ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ಈ ಬಗ್ಗೆ ಕ್ಷೇತ್ರ ಟ್ರಸ್ಟಿ ಬಿ. ಗಂಗಾಧರನ್ ಅಂಬಲತ್ತರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲಿಸಿದ್ದು, ಸ್ಥಳೀಯ ಸಿಸಿ ಟಿವಿ ದೃಶ್ಯದ ಆಧಾರದಲ್ಲಿ ತನಿಖೆ ಮುಂದುವರಿಸುತ್ತಿದ್ದಾರೆ.






