ಕೊಚ್ಚಿ: ಬಸ್ ಪ್ರಯಾಣದರ ಹೆಚ್ಚಿಸಬೇಕೆಂಬ ಬೇಡಿಕೆ ಮುಂದಿರಿಸಿ ನವಂಬರ್ 3ರಿಂದ ಖಾಸಗಿ ಬಸ್‌ಗಳ ಸಂಚಾರ ನಿಲುಗಡೆಗೊಳಿಸಿ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಖಾಸಗಿ ಬಸ್ ಮಾಲಕರ ಸಂಯುಕ್ತ ಮುಷ್ಕರ ಸಮಿತಿ ತೀರ್ಮಾನಿಸಿದೆ.
ಪ್ರಿಯದರ್ಶಿನಿ ಯೋಜನೆ ಯಂತೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿದ ಹಿನ್ನೆಲೆಯಲ್ಲಿ ಖಾಸಗಿ ಬಸ್ ಉದ್ಯಮ ಭಾರೀ ನಷ್ಟದ ಹಾದಿಯಲ್ಲಿ ಸಾಗತೊಡ ಗಿದೆಯೆಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ರಿಯಾಯಿತಿ ಪ್ರಯಾಣದರವನ್ನು ಹೆಚ್ಚಿಸಬೇಕೆಂಬ ಬೇಡಿಕೆಯನ್ನೂ ಸಮಿತಿ ಸರಕಾರದ ಮುಂದಿರಿಸಿದೆ. ಖಾಸಗಿ ಬಸ್ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡು ಕೊಳ್ಳಲಾಗುವುದೆಂದು ಸಾರಿಗೆ ಸಚಿವ ತಿಳಿಸಿದ್ದರೂ ಈತನಕ ಯಾವುದೇ ರೀತಿಯ ಪರಿ ಹಾರವುಂ ಟಾಗಿಲ್ಲವೆಂದು ಸಮಿತಿ ಆರೋಪಿಸಿದೆ.







