ಕಾಸರಗೋಡು: ಪೊಲೀಸರೆಂಬ ಸೋಗಿನಲ್ಲಿ ಬಂದ ದುಷ್ಕರ್ಮಿಗಳ ತಂಡ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿ ಕನ ಬ್ಯಾಗ್ನಿಂದ 25,000 ಸೌದಿ ರಿಯಲ್ (ಸುಮಾರು 6.35 ಲಕ್ಷ ರೂ.) ದರೋಡೆಗೈದ ಬಗ್ಗೆ ಕಾಸರ ಗೋಡು ರೈಲ್ವೇ ಪೊಲೀಸರಿಗೆ ದೂರು ನೀಡಲಾಗಿದೆ.
ಮಲಪ್ಪುರಂ ಮಣಿಯೂರು ಪಾಲ ಕ್ಕಲ್ ಇಲ್ಲಿಕೋಟ್ ಪನ್ನಿಚ್ಚಿಪರಂ ಬಿಲ್ನ ಉಮ್ಮರ್ ಬಾವ ಎಂಬವರ ಹಣವನ್ನು ಈ ರೀತಿ ದರೋಡೆಗೈಯ್ಯ ಲಾಗಿದೆ. ಆ ಬಗ್ಗೆ ಅವರು ನೀಡಿದ ದೂರಿನಂತೆ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ನಾನು ವೆರಾವಲ್ ಎಕ್ಸ್ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿ ಪರಪ್ಪನಂಙಾಡಿಯಿಂದ ಅಕ್ಟೋಬರ್ 20ರಂದು ಉಡುಪಿಗೆ ಪ್ರಯಾಣಿಸುತ್ತಿದ್ದ ದಾರಿ ಮಧ್ಯೆ ಅಂದು ಮುಂಜಾನೆ 3.15ರ ವೇಳೆ ರೈಲು ಹೊಸದುರ್ಗ ನಿಲ್ದಾಣ ತಲುಪಿದಾಗ ಕಂಡರೆ ಗುರುತು ಹಚ್ಚಲು ಸಾಧ್ಯವಾಗುವ ಅಕ್ರಮಿಗಳ ತಂಡವೊಂದು ರೈಲಿನೊಳಗೆ ನುಗ್ಗಿ ಬಂದು ನಾವು ಪೊಲೀಸ್ ಇಲಾಖೆಯ ಡಾನ್ಸಾಫ್ ಸ್ಕ್ವಾಡ್ ಗೆ ಸೇರಿದವರಾಗಿದ್ದೇ ವೆಂದು ಹೇಳಿ ನನ್ನ ಬ್ಯಾಗ್ ಬಲವಂತ ವಾಗಿ ಹಿಡಿದೆಳೆದು ಅದರೊಳಗಿರಿಸಿದ್ದ ಸೌದಿ ರಿಯಲ್ ಕರೆನ್ಸಿ ನೋಟುಗಳನ್ನು ತೆಗೆದು ಪರಾರಿಯಾದರೆಂದು ಪೊಲೀ ಸರಿಗೆ ನೀಡಿ ದೂರಿನಲ್ಲಿ ಉಮ್ಮರ್ ಬಾವ ತಿಳಿಸಿದ್ದಾರೆ. ಈ ಘಟನೆ ಅಕ್ಟೋಬರ್ 20ರಂದು ನಡೆದಿದ್ದರೂ ಆ ಬಗ್ಗೆ ಅಕ್ಟೋಬರ್ ೨೨ರಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಹಣ ಎಗರಿಸಿದ ತಂಡದವರ ಪತ್ತೆಗಾಗಿ ಹೊಸದುರ್ಗ ರೈಲು ನಿಲ್ದಾಣ ಮತ್ತು ಪರಿಸರ ಪ್ರದೇಶಗಳ ಸಿಸಿ ಟಿವಿ ದೃಶ್ಯಗಳನ್ನು ರೈಲ್ವೇ ಪೊಲೀಸರು ಪರಿಶೀಲಿಸತೊಡಗಿ ದ್ದಾರೆ. ಹೀಗೆ ಎಗರಿಸಲಾದ ಸೌದಿ ರಿಯ ಲ್ನ್ನು ಕಾಸರಗೋಡು ನಿವಾಸಿಯೋ ರ್ವರಿಗೆ ನೀಡಲು ತರಲಾಗುತ್ತಿತ್ತೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ. ಆ ಬಗ್ಗೆಯೂ ಪೊಲೀಸರು ಇನ್ನೊಂದೆಡೆ ತನಿಖೆ ಆರಂಭಿಸಿದ್ದಾರೆ. ಹೀಗೆ ಸೌದಿ ರಿಯಲ್ನ್ನು ಎಗರಿಸಿದ ತಂಡದವರು ಹವಾಲಾ ವ್ಯವಹಾರದಲ್ಲಿ ತೊಡಗಿರುವ ತಂಡಕ್ಕೆ ಸೇರಿದವರಾಗಿದ್ದಾರೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿ ದ್ದಾರೆ. ವಾಹನಗಳನ್ನು ತಡೆದು ನಿಲ್ಲಿಸಿ ಹವಾಲಾ ಹಣ ಮತ್ತು ಚಿನ್ನವನ್ನು ದರೋಡೆಗೈಯ್ಯುವ ಹಲವು ತಂಡಗಳು ರಾಜ್ಯದಲ್ಲಿ ಇತ್ತೀಚೆಗಿನಿಂದ ಸಕ್ರಿಯವಾಗಿ ಕಾರ್ಯವೆಸಗುತ್ತಿದೆ ಯಾದರೂ ರೈಲಿನೊಳಗೆ ನುಗ್ಗಿ ಹಣ ಎಗರಿಸುವುದು ಅಸಾಧಾರಣ ಕೃತ್ಯವಾಗಿದೆ.
ವಿದೇಶ ಹಾಗೂ ಇತರೆಡೆಗಳಿಂದ ತರುತ್ತಿರುವ ಹವಾಲಾ ಹಣ, ಚಿನ್ನ ಮತ್ತಿತರ ಅಮೂಲ್ಯ ಸಾಮಗ್ರಿಗಳನ್ನು ಸಾಗಿಸುತ್ತಿರುವವರ ವಾಹನಗಳನ್ನು ದಾರಿ ಮಧ್ಯೆ ತಡೆದು ನಿಲ್ಲಿಸಿ ದರೋಡೆ ಗೈಯ್ಯುವ ಪೊಟ್ಟಿಕಲ್ ತಂಡವೊಂದು ರಾಜ್ಯದಲ್ಲಿ ಕಾರ್ಯವೆಸಗುತ್ತಿದೆ. ಇಂತಹ ತಂಡಗಳು ವಿಶೇಷವಾಗಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವವರ ಮೇಲೆ ತೀವ್ರ ನಿಗಾ ಇರಿಸಿ ನಂತರ ಅವರು ವಾಹನಗಳು ಸಾಗುವ ವೇಳೆ ಅದನ್ನು ತಮ್ಮ ವಾಹನದಲ್ಲಿ ಹಿಂಬಾಲಿಕೊಂಡು ದಾರಿ ಮಧ್ಯೆ ವಿದೇಶದಿಂದ ಬರುತ್ತಿರುವವರ ವಾಹನಗಳನ್ನು ತಡೆದು ನಿಲ್ಲಿಸಿ ದರೋಡೆಗೈಯ್ಯುವ ತಂಡ ಇದಾಗಿದೆ. ಆದ್ದರಿಂದ ಹೊಸದುರ್ಗದಲ್ಲಿ ರೈಲಿನಿಂದ ಹಣ ಎಗರಿಸಿದವರು ಇಂತಹ ತಂಡಕ್ಕೆ ಸೇರಿದವರಾಗಿರ ಬಹುದೇ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಸಿಸಿ ಟಿವಿ ದೃಶ್ಯಗಳ ಆಧಾರದಲ್ಲಿ ದರೋಡೆಕೋರರ ಜಾಲವನ್ನು ಪತ್ತೆಹಚ್ಚಿ ಬೇಧಿಸುವ ಶತಪ್ರಯತದಲ್ಲೂ ರೈಲ್ವೇ ಪೊಲೀಸರು ತೊಡಗಿದ್ದಾರೆ.






