ಜೋಡುಕಲ್ಲಿನ ಗಣೇಶ ಮಂದಿರ ಚಪ್ಪರ ಅಧಿಕಾರಿಗಳು ಮುರಿದು ತೆಗೆಯುವರೆಂಬ ಸಂಶಯ: ಮಂದಿರ ಪರಿಸರಕ್ಕೆ ಭಕ್ತಜನಪ್ರವಾಹ

ಮಂಜೇಶ್ವರ:  ಜೋಡುಕಲ್ಲಿನ  ಪೌರಾಣಿಕ ಆರಾಧನಾಲಯವಾದ ಗಣೇಶ ಮಂದಿರ ಸಮೀಪ   ನಿರ್ಮಿಸಿದ ಚಪ್ಪರವನ್ನು  ಪೊಲೀಸರ ನೇತೃತ್ವದಲ್ಲಿ ಮುರಿದು ತೆಗೆಯಲಾಗುವುದೆಂಬ ಸೂಚನೆಯ  ಹಿನ್ನೆಲೆಯಲ್ಲಿ  ಭಾರೀ ಸಂಖ್ಯೆಯಲ್ಲಿ ಭಕ್ತರು  ಮಂದಿರ ಪರಿಸರಕ್ಕೆ ತಲುಪುತ್ತಿದ್ದಾರೆ.  ಸ್ಥಳದಲ್ಲಿ ಸಂಘರ್ಷಾವಸ್ಥೆ ಉಂಟಾ ಗಲಿರುವ ಸಾಧ್ಯತೆಯಿದೆಯೆಂಬ  ಸಂಶಯದಿಂದ  ಪೊಲೀಸರೂ  ಸ್ಥಳಕ್ಕೆ ತಲುಪಿದ್ದಾರೆ.

ಗಣೇಶೋತ್ಸವಕ್ಕೆ ಪೂರ್ವಭಾವಿ ಯಾಗಿ  ಗಣೇಶ ಮಂದಿರಕ್ಕೆ ಹೊಂದಿ ಕೊಂಡು ಚಪ್ಪರ ನಿರ್ಮಿಸಲಾಗಿದೆ.  ಗಣೇಶೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಇಲ್ಲಿ ಪ್ರಧಾನವಾಗಿ ಆಚರಿಸಲಾಗುತ್ತಿದೆ.  ಚಪ್ಪರ ನಿರ್ಮಿಸಿದ ಹಿನ್ನೆಲೆಯಲ್ಲಿ ಸರಕಾರದ ಸ್ಥಳ ಅತಿಕ್ರಮಿಸಿ ನಿರ್ಮಿಸಿದ ಚಪ್ಪರವನ್ನು ಮುರಿದು ತೆಗೆಯಬೇಕೆಂದು ಒತ್ತಾಯಿಸಿ ಯೂತ್ ಲೀಗ್ ರಂಗಕ್ಕಿಳಿದಿತ್ತು. ಈ ಹಿನ್ನೆಲೆ ಯಲ್ಲಿ  ಈ ವಿವಾದದಲ್ಲಿ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದರು. ಹಲವು ತಲೆಮಾರುಗಳಿಂದ ಯಾವುದೇ ಅಡಚಣೆ ಯಿಲ್ಲದೆ ಗಣೇಶೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಇದೇ ಸ್ಥಳದಲ್ಲಿ ನಡೆಸುತ್ತಾ ಬಂದಿರು ವುದಾಗಿ ನಾಗರಿಕರು ತಿಳಿಸುತ್ತಿದ್ದಾರೆ. ಇದಕ್ಕಾಗಿ ಈ ಬಾರಿ ಇಲ್ಲಿ  ಚಪ್ಪರ ನಿರ್ಮಿಸ ಲಾಗಿದೆ. ಆರಾಧನಾಲಯಗಳ  ಸಹಿತ  ವಿವಿಧ ಹೆಸರಲ್ಲಿ    ವ್ಯಾಪಕವಾಗಿ  ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸ ಲಾಗಿದೆಯೆಂದೂ ಅವುಗಳ ವಿರುದ್ಧ  ಮೌನ ಪಾಲಿಸುವವರು ಈ ವಿಷಯದಲ್ಲಿ  ಮಾತ್ರ ಸವಾಲೊಡ್ಡುತ್ತಿರುವುದು ಆಶ್ಚರ್ಯಕರವೆಂದು ಕ್ರಿಯಾಸಮಿತಿ ಚೆಯರ್‌ಮೆನ್ ರವೀಶ ತಂತ್ರಿ ಕುಂಟಾರು, ಲೋಕೇಶ್ ನೋಂಡ ತಿಳಿಸಿದ್ದಾರೆ.

RELATED NEWS

You cannot copy contents of this page