ಮಾಯಾ ಟ್ರೇಡರ್ಸ್ ಗ್ರಾಂಡ್  ದೀಪಾವಳಿ ಸ್ಕ್ರಾಚ್ ಕಾರ್ಡ್ ಬಿಡುಗಡೆ

ಮಂಗಳೂರು: ದೀಪಾವಳಿ ಸಂ ಭ್ರಮವನ್ನು ಮತ್ತಷ್ಟು ವಿಶೇಷವಾಗಿಸಲು ಮಾಯಾ ಟ್ರೇಡರ್ಸ್ ‘ಗ್ರ‍್ಯಾಂಡ್ ದೀಪಾವಳಿ ಬಂಪರ್ ಕೊಡುಗೆ’ಯನ್ನು ಘೋಷಿಸಿದೆ. ಹಬ್ಬದ ಖರೀದಿಯ ಸಂತಸದೊAದಿಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನೂ ಕಲ್ಪಿಸಿರುವ ಈ ವಿಶೇಷ ಕೊಡುಗೆ, ಗ್ರಾಹಕರಿಗೆ ದೀಪಾವಳಿಯನ್ನು ಇನ್ನಷ್ಟು ಸ್ಮರಣೀಯವಾಗಿಸಲಿದೆ.
ಎಂ.ಜಿ ರಸ್ತೆಯಲ್ಲಿರುವ ಪ್ರವೀಣ್ ಶೇಟ್ ಕ್ರೇಕರ್ಸ್ ಶಾಪ್‌ನಲ್ಲಿ ಜರಗಿದ ಸಮಾರಂಭದಲ್ಲಿ ಶಾಸಕ ಡಿ. ವೇದವ್ಯಾಸ್ ಕಾಮತ್ ಸ್ಕಾçö್ತಚ್ ಕಾರ್ಡ್ ಬಿಡುಗಡೆಗೊಳಿಸಿದರು. ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತಸರ ಪ್ರವೀಣ್ ಶೇಟ್ ನಾಗ್ವೇಕರ್, ಮೊಕ್ತಸರ ವಿನಾಯಕ ಕೆ. ಶೇಟ್, ಮಾಯಾ ಟ್ರೇಡರ್ಸ್ ಸಂಸ್ಥೆಯ ಆಡಳಿತ ಪಾಲುದಾರ ಕೆ. ಅನಂತ್ ಕಾಮತ್, ಪಾಲುದಾರ ಕೆ. ಲಕ್ಷಣ್ ಕಾಮತ್, ಶ್ರೀ ಮಹಾಲಕ್ಷಿö್ಮ ರವಳನಾಥ ದೇವರು ಟ್ರಸ್ಟಿ ಗೋಪಿಚಂದ್ ಶೇಟ್, ತರ್ಜನಿ ಕಮ್ಯುನಿಕೇಷನ್ ಚೇರ್ಮನ್ ಸಂಜಯ್ ಪ್ರಭು, ಕದ್ರಿ ಮಂಜುನಾಥ ದೇವಸ್ಥಾನದ ಟ್ರಸ್ಟಿ ದಿಲ್‌ರಾಜ್ ಆಳ್ವ, ವಕೀಲರ ಸಂಘದ ಅಧ್ಯಕ್ಷ ಜಗದೀಶ ಶೇಣವ, ಭಾಸ್ಕರ್ ದೇವಸ್ಯ, ಭಾಸ್ಕರ್ ಚಂದ್ರ, ಪ್ರವೀಣ್ ಶೇಟ್, ಕ್ರೇಕರ್ಸ್ ಶಾಪ್‌ನ ಮಾಲಕ ಪ್ರವೀಣ್ ಶೇಟ್, ಶ್ರೀನಿವಾಸ್ ಪಿ. ಶೇಟ್, ಧನ್‌ರಾಜ್ ಶೇಟ್, ಸುದೇಶ್ ಶೇಟ್, ಸದಾನಂದ ಶೇಟ್, ಸಂದೇಶ್ ಶೇಟ್ ಉಪಸ್ಥಿತರಿದ್ದರು.
ಪ್ರತಿ ರೂ. ೫೦೦ ಮೌಲ್ಯದ ಪಟಾಕಿ ಖರೀದಿಗೆ ಗ್ರಾಹಕರು ಬಂಪರ್ ಬಹುಮಾನ ಯೋಜನೆಯಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ. ಪ್ರತಿ ರೂ. ೫೦೦ ಖರೀದಿಗೆ ಎಸ್‌ಎಂಎಸ್ ಮೂಲಕ ಲಕ್ಕಿ ಡ್ರಾ ಸ್ಕಾçö್ಯಚ್ ಕಾರ್ಡ್ ಕೂಪನ್ ದೊರೆಯಲಿದ್ದು, ಅದೃಷ್ಟಶಾಲಿ ಗ್ರಾಹಕರಿಗೆ ಮಾರುತಿ ಸುಜುಕಿ ಗ್ರ‍್ಯಾಂಡ್ ವಿಟಾರಾ ಕಾರು ಬಂಪರ್ ಬಹುಮಾನವಾಗಿ ಗೆಲ್ಲುವ ಅವಕಾಶವಿದೆ.
ಜೆÆತೆಗೆ ಆಕರ್ಷಕ ಬಾಲಿ ಪ್ರವಾಸದ ವೋಚರ್‌ಗಳು ಸೇರಿದಂತೆ ಹಲವು ಬಹುಮಾನಗಳು ಗ್ರಾಹಕರಿಗಾಗಿ ಕಾದಿವೆ. ಸಂಸ್ಥೆಯ ಮೇಲೆ ವಿಶ್ವಾಸವಿಟ್ಟು, ನಿರಂತರ ಬೆಂಬಲ ನೀಡುತ್ತಿರುವ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಲು ವಾರ್ಷಿಕ ಬಂಪರ್ ಕೊಡುಗೆ ಹಮ್ಮಿಕೊಳ್ಳಲÁಗಿದೆ. ಬಹುಮಾನಗಳ ಲಕ್ಕಿ ಡ್ರಾವನ್ನು ಸ್ಥಳೀಯ ಗಣ್ಯರ ಸಮ್ಮುಖದಲ್ಲಿ ಸಂಪೂರ್ಣ ಪಾರದರ್ಶಕವಾಗಿ ನಡೆಸಲಾಗುವುದು.

RELATED NEWS

You cannot copy contents of this page