ಜಯಂತಿ ಅಮ್ಮ ನಿಧನ

ಕಾಸರಗೋಡು: ಅಣಂಗೂರಿ ನಲ್ಲಿರುವ ಕಣಿಯೂರು ಎಂಟರ್ ಪ್ರೈಸಸ್ ಸಂಸ್ಥೆಯ ಸ್ಥಾಪಕ ಮಾಲಕ ದಿ| ಕಣಿಯೂರು ಗೋವಿಂದ ಭಟ್‌ರ ಪತ್ನಿ ಜಯಂತಿ ಅಮ್ಮ (85) ಇಂದು ಮುಂಜಾನೆ ವಿದ್ಯಾನಗರದ ಚಿನ್ಮಯ ಕಾಲನಿಯಲ್ಲಿರುವ ಶ್ರೀರಕ್ಷಾ ನಿವಾಸದಲ್ಲಿ ನಿಧನಹೊಂದಿದರು. ಮೃತರು ಮಕ್ಕಳಾದ ಕಣಿಯೂರು ಮಹೇಶ್ ಭಟ್(ಅಣಂಗೂರು ಕಣಿಯೂರು ಎಂಟರ್‌ಪ್ರೈಸಸ್ ಮಾಲಕ), ಡಾ| ಆಶಾ ಬಿ.ಎಂ ಭಟ್ (ದಂತ ವೈದ್ಯರು ವಿದ್ಯಾನಗರ), ಉಷಾ ಕೆ.ಆರ್. ಭಟ್  ಕಾರ್ಯಾಡ್ (ಮಂಗಳೂರು), ಸೊಸೆ ವಿಜಯಲಕ್ಷ್ಮಿ ಎಂ ಭಟ್ ವಿದ್ಯಾನಗರ ಚಿನ್ಮಯಕಾಲನಿ, ಅಳಿಯಂದಿರಾದ  ಬೇತ ಮಹಾಬಲ ಭಟ್, ಕಾರ್ಯಾಡ್ ರಾಧಾಕೃಷ್ಣ ಭಟ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕಾಸರಗೋಡು ಬ್ರಾಹ್ಮಣ ಮಹಾಸಭಾದ ಸಂಚಾಲಕ ಡಿ.  ಜಯನಾರಾಯಣ ತಾಯನ್ನೂರು,  ಮಾಜಿ ಶಾಸಕ  ಸಿ.ಎಚ್. ಕುಂಞಂಬು,  ಮಾಜಿ ನಗರಸಭಾ ಸದಸ್ಯೆ ಸವಿತಾ ಟೀಚರ್ ಮೊದಲಾ ದವರು ಸಂತಾಪ ಸೂಚಿಸಿದ್ದಾರೆ.

You cannot copy contents of this page