ಹೋರಾಟ ಸಮಿತಿಗೆ ಎಸ್‌ಡಿಟಿಯು ಸೇರ್ಪಡೆಗೆ ವಿರೋಧ: ಆಟೋ ಟ್ಯಾಕ್ಸಿ ದರ ಏರಿಕೆ ಆಗ್ರಹಿಸಿ ನ.12ರಂದು ಬಿಎಂಎಸ್‌ನಿಂದ ಏಕಾಂಗಿ ಮುಷ್ಕರ

ಕಾಸರಗೋಡು: ಆಟೋ-ಟ್ಯಾಕ್ಸಿ ದರ ಏರಿಕೆ ಆಗ್ರಹಿಸಿ ನವಂಬರ್ 12ರಂದು ವಿವಿಧ ಕಾರ್ಮಿಕ ಸಂಘಟನೆಗಳನ್ನೊಳ ಗೊಂಡ ಸಂಯುಕ್ತ ಹೋರಾಟ ಸಮಿತಿ ನಡೆಸಲು ನಿರ್ಧರಿಸಿರುವ ಒಂದು ದಿನದ ಸೂಚನಾ ಮುಷ್ಕರಕ್ಕೆ ಸಿಐಟಿಯು ಏಕಪಕ್ಷೀಯವಾಗಿ ಎಸ್‌ಡಿಪಿಐಯ  ಕಾರ್ಮಿಕ ಸಂಘಟನೆಯಾದ ಎಸ್‌ಡಿಟಿಯು ಅನ್ನು ಹೋರಾಟ ಸಮಿತಿಯ ಸಭೆಗೆ ಆಹ್ವಾನಿಸಿರುವುದನ್ನು ಪ್ರತಿಭಟಿಸಿ ಹೋರಾಟ ಸಮಿತಿಯಿಂದ ಹೊರಬರಲು ಬಿಎಂಎಸ್ ನಿರ್ಧರಿಸಿದೆ. ಸೂಚನಾ ಮುಷ್ಕರದ ಅಂಗವಾಗಿ ನ. ೩ರಂದು ತಿರುವನಂತಪುರದಲ್ಲಿ ಹೋರಾಟ ಘೋಷಣಾ ಸಮಾವೇಶ ಹಾಗೂ ಅನಂತರ ಎಲ್ಲಾ ಜಿಲ್ಲೆಗಳಲ್ಲೂ ಸಮನ್ವಯ ಸಭಗಳು ನಡದಿತ್ತು. ಕೆಲವು ಜಿಲ್ಲೆಗಳಲ್ಲಿ ಸಿಐಟಿಯು ಏಕಪಕ್ಷೀಯ ವಾಗಿ ಎಸ್‌ಡಿಟಿಯು ಅನ್ನು ಸಭೆಗೆ ಆಹ್ವಾನಿಸಿದ್ದು ಖಂಡನೀಯವಾಗಿದೆ.

ಸಂಘ ಪರಿವಾರದ ಹಲವು ಕಾರ್ಯಕರ್ತರ ಕೊಲೆಗೆ  ಕಾರಣವಾದ ಎಸ್‌ಡಿಪಿಐಯ ಧ್ವಜದೊಂದಿಗೆ  ಬಿಎಂಎಸ್‌ನ ಧ್ವಜವನ್ನು ಸೇರಿಸಲು ಇಚ್ಛಿಸುವುದಿಲ್ಲ. ಆದ್ದರಿಂದ ಸಿಐಟಿಯುನ ಕ್ರಮವನ್ನು ಪ್ರತಿಭಟಿಸಿ ಸಂಯುಕ್ತ ಹೋರಾಟ ಸಮಿತಿಯಿಂದ ಹೊರಬರುವುದಾಗಿ ಬಿಎಂಎಸ್ ತಿಳಿಸಿದೆ.  ನವಂಬರ್ ೧೨ರಂದು ನಿಗದಿಯಾಗಿರುವ ಆಟೋ-ಟ್ಯಾಕ್ಸಿ ಮುಷ್ಕರವನ್ನು  ಬಿಎಂಎಸ್ ಏಕಾಂಗಿಯಾಗಿ ನಡೆಸಲಿದೆ. ಅಂದು ಬಸ್, ಟ್ಯಾಕ್ಸಿ, ಟೆಂಪೋ, ಆಟೋ ಕಾರ್ಮಿಕರನ್ನು ಒಗ್ಗೂಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಬಿಎಂಎಸ್ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಮೋಟಾರು ರಂಗದ ಎಲ್ಲಾ ಬಿಎಂಎಸ್ ಯೂನಿಟ್‌ಗಳು ಇದರ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಕಾಸರಗೋಡು ಜಿಲ್ಲಾ ಆಟೋ ರಿಕ್ಷಾ ಮಜ್ದೂರ್ ಸಂಘ (ಬಿಎಂಎಸ್) ತಿಳಿಸಿದೆ.

You cannot copy contents of this page