ಮಧೂರು: ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದಲ್ಲಿ ನಾಳೆಯಿಂದ ಡಿಸೆಂಬರ್ 9ರ ತನಕ ಕಾರ್ತಿಕ ಮಾಸ ಪೂಜೆ ನಡೆಯಲಿದೆ. ಇದರ ಯಶಸ್ವಿಗೆ ಪೂರ್ವಸಿದ್ಧತಾ ಸಭೆ ಇತ್ತೀಚೆಗೆ ನಡೆಯಿತು. ಯು.ಸುಬ್ರಹ್ಮಣ್ಯಆಸ್ರ ಅಧ್ಯಕ್ಷತೆ ವಹಿಸಿದರು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಯು. ಮಯೂರ ಆಸ್ರ ವಿಷಯ ಮಂಡಿಸಿದರು. ಬಾಲಕೃಷ್ಣ ಉಳಿಯ, ರವೀಂದ್ರನ್ ಉಳಿಯ, ಪದ್ಮರಾಜ ಪರಕ್ಕಿಲ, ನವೀನ ಪರಕ್ಕಿಲ, ಬಾಬು ಪಾಟಾಳಿ, ಸಂತೋಷ್ ಆರ್. ಗಟ್ಟಿ,ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸುರೇಶ್ ಯು.ಆರ್., ಕುಂಞಿಕಣ್ಣ, ರಾಜು ಗಟ್ಟಿ, ಮಾಧವ ಗಟ್ಟಿ, ಆನಂದ ಆಚಾರ್ಯ ಮೊದಲಾದವರು ಭಾಗವಹಿಸಿದರು. ವಿಠಲ ಗಟ್ಟಿ ಪರಕ್ಕಿಲ ಸ್ವಾಗತಿಸಿ, ಚಂದ್ರಶೇಖರ ವಂದಿಸಿದರು.





