ಉಪ್ಪಳ: ಜೋಡುಕಲ್ಲು ತಪೋವನ ಶ್ರೀ ಗಣೇಶ ಮಂದಿರದ ಸಂರಕ್ಷಣೆಗಾಗಿ ಭಜನೆ, ವಿವಿಧ ದಾರ್ಮಿಕ ಕಾರ್ಯ ಕ್ರಮಗಳು ಮುಂದುವರಿಯುತ್ತಿದ್ದು, ನಿನ್ನೆ ಮಧ್ಯಾಹ್ನ ಸ್ಥಳಕ್ಕೆ ವಿಶ್ವಹಿಂದೂ ಪರಿಷತ್ ಮುಖಂಡ ಸೂರ್ಯನಾರಾ ಯಣ ಜಿ., ಹಿಂದೂ ಐಕ್ಯವೇದಿ ಜಿಲ್ಲಾಧ್ಯಕ್ಷ ಎಸ್.ಪಿ ಶಾಜಿ, ಸಹಕಾರ ಭಾರತಿ ರಾಜ್ಯ ಅಧ್ಯಕ್ಷ ಕರುಣಾಕರನ್ ನಂಬ್ಯಾರ್ ಭೇಟಿ ನೀಡಿದರು. ಈ ವೇಳೆ ಲೊಕೇಶ್ ಜೋಡುಕಲ್ಲು, ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು ಉಪಸ್ಥಿತರಿದ್ದರು.
ಮಂದಿರ ಸಂರಕ್ಷಣಾ ಕ್ರಿಯಾ ಸಮಿತಿ ಕಾರ್ಯದರ್ಶಿ ಲೋಕೇಶ ನೋಂಡಾ ಸ್ವಾಗತಿಸಿ, ಶಿವಪ್ರಸಾದ್ ಶೆಟ್ಟಿ ವಂದಿಸಿದರು. ಇಂದು ಕರ್ನಾಟಕ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಂಗಳೂರು ಶಾಸಕ ಡಾ.ಭರತ್ ಶೆಟ್ಟಿ, ಬಿಜೆಪಿ ದಕ್ಷಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಭೇಟಿ ನೀಡುವರು.





