ಬಸ್‌ನಲ್ಲಿ ಕುಸಿದುಬಿದ್ದ ಪ್ರಯಾಣಿಕನ ಜೀವ ರಕ್ಷಿಸಿದ ನೌಕರರು

ಕಾಸರಗೋಡು: ಬಸ್‌ನಲ್ಲಿ ಕುಸಿದುಬಿದ್ದ ಮಧ್ಯವಯಸ್ಕನನ್ನು ತಕ್ಷಣ ಆಸ್ಪತ್ರೆಗೆ ತಲುಪಿಸಿ  ಜೀವ ರಕ್ಷಿಸಿ ಬಸ್ ನೌಕರರು  ಮಾದರಿ ಯಾಗಿದ್ದಾರೆ. ಕಾಸರಗೋಡು-ಬದಿಯಡ್ಕ ರೂಟ್‌ನಲ್ಲಿ ಸಂಚರಿಸುವ ದುರ್ಗಾಗಣೇಶ್ ಸ್‌ನ ನೌಕರರು ವ್ಯಕ್ತಿಯ ಜೀವ ರಕ್ಷಿಸಿದ್ದಾರೆ.

ನಿನ್ನೆ ಚೆರ್ಕಳದಿಂದ ಬಸ್ ಪ್ರಯಾಣ ಆರಂಭಿಸಿದಾಗ ಪ್ರಯಾಣಿಕನಿಗೆ ಅಸೌಖ್ಯ ಕಾಣಿಸಿಕೊಂಡಿದ್ದು, ತಕ್ಷಣ ಕುಸಿದುಬಿದ್ದು ಪ್ರಜ್ಞೆ ಕಳೆದುಕೊಂ ಡಿದ್ದನು. ಕೂಡಲೇ ಬಸ್ ನಿಲ್ಲಿಸಿ ನೌಕ ರರು ಹಾಗೂ ಇತರ ಪ್ರಯಾಣಿಕರು ಸೇರಿ ಪ್ರಥಮ ಶುಶ್ರೂಷೆ ನೀಡಿದರು.  ಬಸ್‌ನಲ್ಲಿ ಪ್ರಯಾಣಿಕರು ಕಿಕ್ಕಿರಿದಿದ್ದ ಹಿನ್ನೆಲೆಯಲ್ಲಿ  ಅದೇ ಬಸ್‌ನಲ್ಲಿ ವ್ಯಕ್ತಿಯನ್ನು  ಆಸ್ಪತ್ರೆಗೆ ತಲುಪಿಸುವುದು ಅಸಾಧ್ಯ ವೆಂದು ತಿಳಿದು ಬೇರೊಂದು ವಾಹನದಲ್ಲಿ ಆಸ್ಟರ್ ಮಿಮ್ಸ್‌ಗೆ ತಲುಪಿಸಲಾಯಿತು. ಬಸ್‌ನ ಓರ್ವ ನೌಕರನೂ  ಅವರೊಂದಿಗೆ ಆಸ್ಪತ್ರೆಗೆ ತಲುಪಿದರು.  ಬಸ್ ನೌಕರರ ಈ ಮಾನವೀಯತೆಯಿಂದ ವ್ಯಕ್ತಿಯ ಜೀವ ರಕ್ಷಿಸಲಾಯಿತು.

RELATED NEWS

You cannot copy contents of this page