ಕುಂಬಳೆ: ಇಚ್ಲಂಗೋಡು ಪಚ್ಚಂಬಳ ಬಾವ ಪಕೀರ್ ಮಖಾಂ ಉರೂಸ್ ಈ ತಿಂಗಳ 15ರಿಂದ 29ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆಯೆಂದು ಉರೂಸ್ ಸಮಿತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ೧೫ರಂದು ಸಂಜೆ 4ಗಂಟೆಗೆ ಉರೂಸ್ ಆರಂಭಗೊಳ್ಳಲಿದ್ದು, ಕುಂಬೋಲ್ ಕೆ.ಎಸ್. ಆಟ್ಟಕೋಯ ತಂಙಳ್ ನೇತೃತ್ವದಲ್ಲಿ ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಅನ್ಸರ್ ಶೆರೂಲ್ ಧ್ವಜಾರೋಹಣಗೈಯ್ಯುವರು. ರಾತ್ರಿ 8 ಗಂಟೆಗೆ ಕುಂಬೋಲ್ ಕೆ.ಎಕ್. ಜಾಫರ್ ಸಾದಿಕ್ ತಂಙಳ್ ಉದ್ಘಾಟಿಸುವರು. ಜಲಾಲುದ್ದೀನ್ ಸಹಅದಿ ಅಲ್‌ಬುಖಾರಿ ಅಧ್ಯಕ್ಷತೆ ವಹಿಸುವರು. ಇಸ್ಮಾಯಿಲ್ ಸಖಾಫಿ ಮಖಂ ಸಿಯಾರತ್‌ಗೆ ನೇತೃತ್ವ ನೀಡುವರು. ಮೊಹಮ್ಮದ್ ತ್ವಾಹಿರ್ ಸಖಾಫಿ ಅಲ್‌ವಾರಿಸ್ ಪ್ರಧಾನ ಭಾಷಣ ಮಾಡುವರು. ಶಾಸಕ ಎ.ಕೆ.ಎಂ. ಅಶ್ರಫ್ ಭಾಗವಹಿಸುವರು. ಈ ದಿನಗಳಲ್ಲಿ ಧಾರ್ಮಿಕ ಪ್ರವಚನ, ಸ್ವಲಾತ್ ಮಜ್ಲೀಸ್, ಆತ್ಮೀಯ ಸಂಗಮ ನಡೆಯಲಿದೆ. 19ರಂದು ಸಂಜೆ 3 ಗಂಟೆಗೆ ಸ್ವಾಲಾತ್ ಮಜ್ಲೀಸ್‌ಗೆ ಅಬ್ದುಲ್ ರಹ್‌ಮಾನ್ ಮಸೂದ್ ಅಲ್‌ಬುಖಾರಿ, 26ರಂದು ಸೈನುಲ್ ಅಬಿದಿನ್ ತಂಙಳ್ ಅಲ್‌ಬುಖಾರಿ ನೇತೃತ್ವ ನೀಡುವರು. 28ರಂದು ರಾತ್ರಿ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸುವರು. ಈ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿ ಪದಾಧಿಕಾರಿಗಳು ಭಾಗವಹಿಸಿದರು.






