ಮಾರ್ಪನಡ್ಕ: ಕುಂಬ್ಡಾಜೆ ಪಂಚಾಯತ್ನ ಬೆಳಿಂಜ, ಅಲಿಂಜ, ಪೊಸಲಿಗೆ ಮೊದಲಾದ ಕಡೆಗಳಲ್ಲಿ ಕಾಡು ಹಂದಿಗಳು ಕೃಷಿ ಸ್ಥಳಕ್ಕೆ ನುಗ್ಗಿ ವ್ಯಾಪಕ ಹಾನಿಗೈದಿವೆ. ಈ ಪ್ರದೇಶದ ಕೃಷಿಕರ ಅಡಿಕೆ, ತೆಂಗು, ಭತ್ತ ಕೃಷಿ ನಾಶವಾಗಿದೆ. ಕಳೆದ ಕೆಲವು ದಿನಗಳಿಂದ ರಾತ್ರಿ ಹೊತ್ತಲ್ಲಿ ಹಿಂಡು ಹಿಂಡಾಗಿ ಕಾಡು ಹಂದಿಗಳು ಅಡಿಕೆ ತೋಟ, ಗದ್ದೆಗಳಿಗೆ ತಲುಪಿ ಅಡಿಕೆ ಗಿಡ, ತೆಂಗಿನ ಗಿಡ, ಬಾಳೆಗಳನ್ನು ಬುಡದಿಂದಲೇ ನಾಶಪಡಿಸುತ್ತಿವೆ. ಈ ಪ್ರದೇಶದಲ್ಲಿ ವರ್ಷಗಳ ಹಿಂದೆ ಕಾಡು ಹಂದಿ ದಾಳಿಯಿಂದ ಓರ್ವ ಮಹಿಳೆ ಮೃತಪಟ್ಟಿದ್ದಳು. ಅಲ್ಲದೆ ಓರ್ವರಿಗೆ ಗಂಭೀರ ಗಾಯ ಉಂಟಾಗಿತ್ತು. ಕಾಡು ಹಂದಿ ಉಪಟಳವನ್ನು ನಿಯಂತ್ರಿಸಲು ಯಾವುದೇ ಕ್ರಮ ಉಂಟಾಗದಿರುವುದರಿಂದ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಸಂಬಂಧಪಟ್ಟ ಜನಪ್ರತಿನಿಧಿಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಕಷ್ಟಪಟ್ಟು ಬೆಳೆಸಿದ ಕೃಷಿಗಳನ್ನು ಈ ರೀತಿ ನಾಶಮಾಡುವ ಹಂದಿಗಳ ನಿಯಂತ್ರ ಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಂಚಾಯತ್ ಅಧಿಕಾರಿಗಳಲ್ಲಿ ಸ್ಥಳೀಯ ಕೃಷಿಕರು ಆಗ್ರಹಿಸಿದ್ದಾರೆ.






