ಏಣಿಯರ್ಪುವಿನ ಶ್ಯಾಮಲಾ ನಿಧನ

ನೀರ್ಚಾಲು: ಏಣಿಯರ್ಪು ನಿವಾಸಿ ರಾಮ ನಾಯ್ಕ್‌ರ ಪತ್ನಿ ಶ್ಯಾಮಲಾ(74) ನಿಧನ ಹೊಂದಿದರು. ನಿನ್ನೆ ರಾತ್ರಿ ಇವರಿಗೆ ಅಸೌಖ್ಯ ಕಾಣಿಸಿಕೊಂಡಿದ್ದು, ಇದರಿಂದ ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು ಚಿಕಿತ್ಸೆಯಲ್ಲಿದ್ದಂತೆಯೇ ಇಂದು ಮುಂಜಾನೆ ನಿಧನ ಸಂಭವಿಸಿದೆ.

ಮೃತರು ಪತಿ, ಮಕ್ಕಳಾದ ಗೀತಾಲಕ್ಷ್ಮಿ, ಜ್ಯೋತಿಲಕ್ಷ್ಮಿ (ಕುಕ್ಕಂಕೂಡ್ಲು ಅಂಗನವಾಡಿ ಅಧ್ಯಾಪಿಕೆ), ಗೌತಂ ಕುಮಾರ್, ಅಳಿಯಂದಿರಾದ ಕೇಶವ ವಿದ್ಯಾನಗರ (ನಿವೃತ್ತ ಲೇಬರ್ ಆಫೀಸರ್), ಶಿವಣ್ಣ ಕುಂಟಾರು, ಸೊಸೆ ಸಂಧ್ಯಾಲತಾ, ಸಹೋದರರಾದ ಬಾಲಕೃಷ್ಣ ನಾಯ್ಕ್ ಪುತ್ತೂರು, ಗೋಪಾಲಕೃಷ್ಣ ಪುತ್ತೂರು, ದೇವಣ್ಣ ನಾಯ್ಕ್ ಕೆದ್ರೋಳಿ, ಸುರೇಶ್ ಕೆದ್ರೋಳಿ, ಜಯಪ್ರಕಾಶ್ ಕೆದ್ರೋಳಿ, ಸಹೋದರಿ ವಸಂತಿ ಮೈಸೂರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮತ್ತಿಬ್ಬರು ಸಹೋದರಿ ಯರಾದ ಪ್ರಭಾವತಿ, ಲಲಿತ  ಈ ಹಿಂದೆ ನಿಧನಹೊಂದಿದ್ದಾರೆ.

You cannot copy contents of this page