ಅಶೋಕ್ ಸಿಂಘಾಲ್ ಜನ್ಮ ಶತಾಬ್ದಿ ಆಚರಣೆ

ಹೊಸಂಗಡಿ: ವಿಶ್ವ ಹಿಂದೂ ಪರಿಷತ್ ಕಣ್ಣೂರು ವಿಭಾಗದ ವತಿಯಿಂದ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಮಾಜಿ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರ ಜನ್ಮ ಶತಾಬ್ದಿ ಕಾರ್ಯಕ್ರಮ ನಿನ್ನೆ ಹೊಸಂ ಗಡಿಯ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಲಯ ‘ಪ್ರೇರಣಾ’ದಲ್ಲಿ ನಡೆಯಿತು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷೆ ಮೀರಾ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರಿಯ ಕಾರ್ಯದರ್ಶಿ ದೀಪಕ್ ರಾಜಗೋ ಪಾಲ್ ಉದ್ಘಾಟಿಸಿ, ಅಶೋಕ್ ಸಿಂಘಾಲ್‌ರವರ ಜೀವನ ರೀತಿ, ಆದರ್ಶದ ಬಗ್ಗೆ ತಿಳಿಸಿದರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹಾಗೂ ಚಿನ್ಮಯ ಮಿಷನ್‌ನ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಅನುಗ್ರಹ ಪ್ರಾರ್ಥನೆ ನಡೆಸಿದರು.
ಮಾತೃಶಕ್ತಿಯ ನೇತೃತ್ವದಲ್ಲಿ ಸಾಮೂಹಿಕವಾಗಿ ವಂದೇ ಮಾತರಂ ಹಾಡಲಾಯಿತು. ರಾಜ್ಯ ಉಪಾಧ್ಯಕ್ಷ ಎಂ.ಕೆ. ದಿವಾಕರನ್, ರಾಜ್ಯ ಜಂಟಿ ಕಾರ್ಯದರ್ಶಿ ಅನುರಾಗ್ ಟಿ.ಸಿ., ವಿಭಾಗ ಜಂಟಿ ಕಾರ್ಯದರ್ಶಿ ಸಂಕಪ್ಪ ಭಂಡಾರಿ, ಜಿಲ್ಲಾ ಅಧ್ಯಕ್ಷ ಜಯದೇವ್ ಖಂಡಿಗೆ ಹಾಗೂ ಜಿಲ್ಲಾ ಕಾರ್ಯ ದರ್ಶಿ ಡಾ. ಶಿವರಾಯ ಭಟ್ ಬಳಕ್ಕ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್‌ನ ವಿವಿಧ ಪದಾದಿ üಕಾರಿಗಳು, ಕಾರ್ಯಕರ್ತರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದರು. ಕಣ್ಣೂರು ವಿಭಾಗ ಕಾರ್ಯದರ್ಶಿ ಪ್ರದೀಪ್ ಸ್ವಾಗತಿಸಿದರು. ಪದ್ಮಮೋಹನ್ ದಾಸ್ ನಿರ್ವಹಿಸಿದರು.

You cannot copy contents of this page