ಬಿಎಂಎಚ್ ನವ ಕ್ಯಾನ್ಸರ್  ಇನ್‌ಸ್ಟಿಟ್ಯೂಟ್ ಕಣ್ಣೂರಿನಲ್ಲಿ ಉದ್ಘಾಟನೆ

ಕಣ್ಣೂರು: ಉತ್ತರ ಮಲಬಾರ್‌ನಲ್ಲಿ ಕ್ಯಾನ್ಸರ್ ಆರೈಕೆ ರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿ ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನ ಬಿಎಂಎಚ್ ನವ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಕಣ್ಣೂರು ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನಲ್ಲಿ ಕಾರ್ಯಾರಂಭಗೊಂಡಿತು. ಔಪಚಾರಿಕ ಉದ್ಘಾಟನೆಯ ಜೊತೆಗೆ ಕ್ಯಾನ್ಸರ್‌ನ್ನು ಹಿಮ್ಮೆಟ್ಟಿಸಿದವರ ಸಂಗಮ ನಡೆಯಿತು. ಅತ್ಯಂತ ನೂತನ ಚಿಕಿತ್ಸಾ ವ್ಯವಸ್ಥೆಗಳು, ಅನುಭವಸ್ಥ ತಜ್ಞ ಡಾಕ್ಟರ್‌ಗಳ ಸೇವೆಯು ಒಂದೇ ಸೂರಿನಡಿ ಲಭ್ಯವಾಗಿಸಿಕೊಂಡು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿರುವ ಕ್ಯಾನ್ಸರ್ ಆರೈಕೆಯನ್ನು ನವ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಜ್ಜುಗೊಳಿಸಲಾಗಿದೆ. ಅಲ್ಲದೆ ಕ್ಯಾನ್ಸರ್ ರೋಗನಿರ್ಣಯ, ಮೆಡಿಕಲ್ ಓಂಕಾಲಜಿ, ಸರ್ಜಿಕಲ್ ಓಂಕಾಲಜಿ, ಹೆಮಟೋಲಜಿ, ರೇಡಿಯೇ ಶನ್ ಥೆರಾಫಿ ಮೊದಲಾದ ಸಮಗ್ರ ಚಿಕಿತ್ಸಾ ಸೌಕರ್ಯಗಳು ಇನ್ನು ಕಣ್ಣೂರಿನ ರೋಗಿ ಗಳಿಗೆ ಲಭ್ಯಗೊಳಿ ಸುವುದು ಎಂಬುದು ಈ ಇನ್‌ಸ್ಟಿಟ್ಯೂ ಟ್‌ನ ಗುರಿಯಾಗಿದೆ ಎಂದು ಆಸ್ಪತ್ರೆಯ ಕ್ಲಸ್ಟರ್ ಸಿಇಒ ನಿರೂಪ್ ಮುಂಡಯಾಡನ್ ತಿಳಿಸಿದರು.

ಉದ್ಘಾಟನೆಯಂಗವಾಗಿ ನಾಲ್ಕನೇ ಹಂತದ ಕ್ಯಾನ್ಸರನ್ನು ಹಿಮ್ಮೆಟ್ಟಿಸಿದ ಕಣ್ಣೂರು ಬಿಎಂಎಚ್‌ನ ತಜ್ಞ ಚಿಕಿತ್ಸೆಯ ಮೂಲಕ ಕಳೆದ ಒಂದು ವರ್ಷದಿಂದ ಪೂರ್ಣವಾಗಿ ಬದುಕಿಗೆ ಹಿಂತಿರುಗಿದ ಸಿಜೋ ರೊಸಾರಿಯೋ ಸಹಿತವಿರುವ ಹಲವಾರು ರೋಗಿಗಳು ತಮ್ಮ ಹೋರಾಟದ ಅನುಭವಗಳನ್ನು ಸಂಗಮದಲ್ಲಿ ಹಂಚಿಕೊಂಡರು.

ಖ್ಯಾತ ಚಲನಚಿತ್ರ ನಟ, ನಾಟಕಕಾರ ಜೋಯ್ ಮ್ಯಾಥ್ಯು ಉದ್ಘಾಟಿಸಿದರು. ಡಾ| ಜ್ಯೋತಿ ಪಿ.ಎಂ., ನಿರೂಪ್ ಮುಂಡ ಯಾಡನ್, ಡಾ| ಮೊಹಮ್ಮದ್ ಅಬ್ದುಲ್ ನಾಸರ್, ಡಾ| ಆಲ್ವಿನ್ ಜೋರ್ಜ್, ಡಾ| ಅರುಣ್ ಮೋಹನ್, ಡಾ| ವಿಷ್ಣು ಸಂತೋಷ್, ಡಾ| ಶಿಂಟೋ ಫ್ರಾನ್ಸಿಸ್, ಡಾ| ಸುಧಿನ್ ಎಸ್ ಭಾಗವಹಿಸಿದರು.

You cannot copy contents of this page