ಶಬರಿಮಲೆ ಮಂಡಲ ಕಾಲದ ತೀರ್ಥಾಟನೆ ಆರಂಭ

ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಿನ್ನೆ ಸಂಜೆ ಗರ್ಭಗುಡಿ ಬಾಗಿಲು ತೆರೆಯುವುದರೊಂದಿಗೆ ಈ ಬಾರಿಯ ಮಂಡಲ-ಮಕರಜ್ಯೋತಿ ತೀರ್ಥಾಟನೆ ಆರಂಭಗೊಂಡಿತು. ನಿನ್ನೆ ಭಾರೀ ಸಂಖ್ಯೆಯಲ್ಲಿ ತೀರ್ಥಾಟಕರು ಕ್ಷೇತ್ರಕ್ಕೆ ತಲುಪಿದ್ದರು. ಈ ಹಿನ್ನೆಲೆಯಲ್ಲಿ ಒಂದು ಗಂಟೆ ಮುಂಚಿತವಾಗಿ ಸಂಜೆ 4 ಗಂಟೆಗೆ ಕ್ಷೇತ್ರದ ಬಾಗಿಲು ತೆರೆಯಲಾಯಿತು.    ಕರ್ತವ್ಯ ತೆರಳುವ ಮುಖ್ಯ ಅರ್ಚಕ ಇ.ಡಿ. ಪ್ರಸಾದ್ ನಂಬೂದಿರಿ, ತಂತ್ರಿ ಕಂಠರ ಬ್ರಹ್ಮದತ್ತನ್‌ರ ಉಪಸ್ಥಿತಿಯಲ್ಲಿ ಗರ್ಭಗುಡಿಯ ಬಾಗಿಲು ತೆರೆದು ದೀಪ ಬೆಳಗಿಸಲಾಯಿತು.  ಅನಂತರ ಶಬರಿಮಲೆಯ ನೂತನ ಮುಖ್ಯ ಅರ್ಚಕ ಅರೀಕರ ಸುಬ್ರಹ್ಮಣ್ಯನ್ ಶಂಕರನ್ ನಂಬೂದಿರಿ ಹಾಗೂ ಮಾಳಿಗಪುರಂ ಮುಖ್ಯ ಅರ್ಚಕ ಎ. ದಾಮೋದರನ್ ನಂಬೂದಿರಿಯವರ ಸ್ಥಾನಾರೋಹಣ ಕಾರ್ಯಕ್ರಮಗಳು ಸಂಜೆ ನಡೆಯಿತು.

ಇಂದಿನಿಂದ ಕ್ಷೇತ್ರದಲ್ಲಿ ತುಪ್ಪಾಭಿ ಷೇಕ ಆರಂಭಗೊಂಡಿದ್ದು, ಮಂಡಲ ಕಾಲ ಪೂಜೆಗಳು ಮುಂಜಾನೆ 3.2೦ಕ್ಕೆ ಅಷ್ಟದ್ರವ್ಯ ಮಹಾಗಣಪತಿ ಹೋಮದೊಂದಿಗೆ ಆರಂಭಗೊಳ್ಳಲಿದೆ. ತಂತ್ರಿ ಕಂಠರ ಬ್ರಹ್ಮದತ್ತನ್ ನೇತೃತ್ವ ವಹಿಸುವರು.  ೩.೩೦ಕ್ಕೆ ಆರಂಭಿಸುವ ತುಪ್ಪಾಭಿಷೇಕ 11 ಗಂಟೆ ವರೆಗೆ ಮುಂದುವರಿಯಲಿದೆ.

You cannot copy contents of this page