ಮಾನ್ಯ: ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರಗುತ್ತಿರುವ ಶ್ರೀಮದ್ ಭಾಗವತ ಸಪ್ತಾಹ ಯಜ್ಞದ ಎರಡನೇ ದಿನವಾದ ನಿನ್ನೆ ಸಂಜೆ ವಿಶೇಷ ವಿದ್ಯಾಗೋಪಾಲ ಮಂತ್ರಾರ್ಚನೆ ನೆರವೇರಿತು. ಭಾಗವತ ಪ್ರವಚನಕಾರರಾದ ಬ್ರಹ್ಮಶ್ರೀ ನಾರಾಯಣಮೂರ್ತಿ ಗುರುಪುರಂ ವಿದ್ಯಾರ್ಥಿಗಳಿಗೆ ವಿದ್ಯಾಗೋಪಾಲ ಮಂತ್ರೋಪದೇಶ ನೀಡಿ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ನೂರಾರು ವಿದ್ಯಾರ್ಥಿಗಳು ಭಕ್ತಿ, ಶ್ರದ್ಧೆಯಿಂದ ದೀಪಾರ್ಚನೆ ಮಾಡಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾಭಿವೃದ್ಧಿಗಾಗಿ ಪ್ರಾರ್ಥಿಸಿದರು. ಭಾಗವತ ಸಪ್ತಾಹ ನ. ೨೧ರ ವರೆಗೆ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 6.30ರಿಂದ ರಾತ್ರಿ 7.3೦ರ ತನಕ ಪಾರಾಯಣ, ಸಾಮೂಹಿಕ ವಿಷ್ಣುಸಹಸ್ರನಾಮ, ಪ್ರವಚನ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ.





