ಚಿನ್ನದ ಬೆಲೆಯಲ್ಲಿ  ಏಕಾಏಕಿ  ಪವನ್‌ಗೆ 3,760 ರೂ.ಕುಸಿತ

ಕೊಚ್ಚಿ: ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಕುಸಿತ ಕಂಡುಬಂದಿದೆ. ಪವನ್‌ಗೆ ಏಕಾಏಕಿ 3,760 ರೂಪಾಯಿ ಕಡಿಮೆಯಾಗಿ 92,080 ರೂಪಾಯಿಗೆ ತಲುಪಿದೆ. ನಿನ್ನೆ 22 ಕ್ಯಾರೆಟ್‌ನ  1  ಪವನ್ ಚಿನ್ನಕ್ಕೆ  95,840 ರೂಪಾಯಿ, ಗ್ರಾಂಗೆ 11,980 ರೂಪಾಯಿ ಆಗಿತ್ತು. ಇಂದು  ಬೆಲೆ  ಗ್ರಾಂಗೆ 470 ರೂಪಾಯಿ ಕಡಿಮೆಯಾಗಿದ್ದು, ಈ ಮೂಲಕ 11,510 ರೂಪಾಯಿಗೆ ಇಳಿದಿದೆ. 18 ಕ್ಯಾರೆಟ್ ಚಿನ್ನಕ್ಕೆ ಬೆಲೆ 385 ರೂಪಾಯಿ ಕಡಿಮೆಯಾಗಿ 9420 ರೂಪಾಯಿಯಾಗಿದೆ.  ನ. 17ರಂದು 1 ಪವನ್ ಚಿನ್ನದ ಬೆಲೆ 1 ಲಕ್ಷಕ್ಕಿಂತ ಕಡಿಮೆಯಾಗಿತ್ತು. ಈ ವರ್ಷ ಜನವರಿಯಲ್ಲಿ  ಪವನ್‌ಗೆ 1.30 ಲಕ್ಷ ರೂಪಾಯಿಗೆ ತಲುಪಿ ದಾಖಲೆ ನಿರ್ಮಿಸಿತ್ತು. ನಿರಂತರ ಬೆಲೆ ಕಡಿಮೆಯಾದರೆ 60,000 ರೂಪಾಯಿಗೆ ತಲುಪಲಿದೆಯೆಂದು ಚಿನ್ನ ವ್ಯಾಪಾರಿಗಳು ಅಭಿಪ್ರಾಯಪಡುತ್ತಿದ್ದಾರೆ. ಇದೇ ವೇಳೆ ಬೆಳ್ಳಿಯ ಬೆಲೆಯಲ್ಲೂ ಕಡಿತವುಂಟಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಉಂಟಾಗಿರುವ ಭಾರೀ ಕುಸಿತವೇ ಕೇರಳದಲ್ಲೂ ಬೆಲೆ ಕಡಿಮೆಯಾಗಲು ಪ್ರಧಾನ ಕಾರಣವಾಗಿದೆ. ಈ ವರ್ಷ ಜನವರಿಯಲ್ಲಿ ಒಂದು ಔನ್ಸ್‌ಗೆ 5,595 ಡಾಲರ್‌ಗೆ ತಲುಪಿ ದಾಖಲೆ ಸೃಷ್ಟಿಯಾಗಿದ್ದ ಚಿನ್ನಕ್ಕೆ ಅನಂತರ ಬೆಲೆ ಕಡಿಮೆಯಾಗುತ್ತಾ ಸಾಗಿದೆ. ಚಿನ್ನಕ್ಕೆ ಬೆಲೆ ಹೆಚ್ಚಿರುವಾಗ  ಹಲವು ಠೇವಣಿದಾರರು  ಚಿನ್ನ ಮಾರಾಟಗೈಯ್ಯಲು ತೊಡಗಿರುವುದೇ ಬೆಲೆ ಕುಸಿಯಲು ಪ್ರಧಾನ ಕಾರಣವಾಗಿದೆ.

You cannot copy contents of this page