ಕಾಸರಗೋಡು: ಮನೆಯ ಕಪಾಟಿನೊಳಗಿರಿಸಿದ್ದ ೧೫.೭೫ ಪವನ್ ಚಿನ್ನದೊಡವೆ ಕಳವುಗೈದ ಬಗ್ಗೆ ರಾಜಪುರಂ ಪೊಲೀಸರಿಗೆ ದೂರು ನೀಡಲಾಗಿದೆ. ಪಾಣತ್ತೂರು ಚಿರಂಕಡವು ಮಸೀದಿ ಬಳಿಯ ಹನಾನಾ ಮಂಜಿಲ್‌ನ ಆಯಿಶತ್ ಹಸ್ನಾ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ನ. 9ರಂದು ಸಂಜೆ 6 ಗಂಟೆ ಮತ್ತು ನ.17ರ ಮಧ್ಯಾಹ್ನದ ನಡುವಿನ ಸಮಯದಲ್ಲಿ ಕಳವು ನಡೆದಿದೆಯೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಇದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಮ್ಮ ಮನೆ ಪಕ್ಕದಲ್ಲಿ ಹಿಂದಿ ಭಾಷೆಯ ನಾಲ್ವರು ಮಹಿಳೆಯ ರನ್ನು ಕಂಡಿರುವುದಾಗಿಯೂ ಅವರ ಮೇಲೆ ಸಂಶಯಹೊಂದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.






