ಬೇಕಲ: ಕಾಸರಗೋಡು- ಕಾಞಂಗಾಡ್ ಕೆಎಸ್ಟಿಪಿ ರಸ್ತೆಯ ಉದುಮದಲ್ಲಿ ನಿಯಂತ್ರಣ ತಪ್ಪಿದ ಕಾರು ಲಾಟರಿ ಮಾರಾಟ ದಂಗಡಿಗೆ ನುಗ್ಗಿದೆ. ಇಂದು ಬೆಳಿಗ್ಗೆ 7 ಗಂಟೆ ವೇಳೆ ಕಳನಾಡು ಓವರ್ ಬ್ರಿಡ್ಜ್ ಸಮೀಪ ಅಪಘಾತ ಸಂಭವಿಸಿದೆ. ಲಾಟರಿ ಮಾರಾಟ ಗಾರನಾದ ಕಳನಾಡು ಪುದಿಯ ವಳಪ್ ನಿವಾಸಿ ಚಂದ್ರ (67) ಗಾಯಗೊಂಡರು. ಇವರನ್ನು ಕಾಸರಗೋಡಿನ ಆಸ್ಪತ್ರೆಗೆ ಖಲಿಸಲಾಗಿದೆ. ರಸ್ತೆ ಅಡ್ಡದಾಟುತ್ತಿದ್ದ ಬೈಕ್ಗೆ ಢಿಕ್ಕಿ ಹೊಡೆಯದಿರಲು ಯತ್ನಿಸುತ್ತಿದ್ದ ಮಧ್ಯೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಲಾಟರಿ ಅಂಗಡಿಗೆ ಗುದ್ದಿದೆ ಎಂದು ಹೇಳಲಾಗುತ್ತಿದೆ.






