ಫ್ಲಾಟ್ ಆವರಣಕ್ಕೆ ನುಗ್ಗಿ ಕುಟುಂಬದವರಿಗೆ ಹಲ್ಲೆ: ಆರೋಪಿ ಸೆರೆ

ಕುಂಬಳೆ: ಇಲ್ಲಿಗೆ ಸಮೀಪದ ನಾರಾಯಣಮಂಗಲದ ಫ್ಲಾಟ್ ಆವರಣಕ್ಕೆ ಅಕ್ರಮವಾಗಿ ನುಗ್ಗಿ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಓರ್ವನ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ನಾರಾಯಣಮಂಗಲದ ಮಜೀದ್ (38) ಎಂಬಾತನ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ನಾರಾಯಣಮಂಗಲದ ಅನ್ಸಾರ್ (25) ಎಂಬವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನವೆಂಬರ್ ೯ರಂದು ಸಂಜೆ ಆರೋಪಿ ತನ್ನ ಫ್ಲಾಟ್‌ನ ಆವರಣದೊಳಗೆ ಅಕ್ರಮವಾಗಿ ನುಗ್ಗಿ ಚಾಕುವಿನಿಂದ ನನ್ನ ಕೈಗೆ ಇರಿದನೆಂದು, ಅದನ್ನು ತಡೆಯಲು ಬಂದ ಸಹೋದರ ಅಲ್ತಾಫ್ (22) ಮತ್ತು ತಾಯಿ ಆಯಿಷಾ (40)ರ ಮೇಲೂ ಹಲ್ಲೆ ನಡೆಸಿ ಚಾಕು ತೋರಿಸಿ ಬೆದರಿಕೆಯೊ ಡ್ಡಿದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅನ್ಸಾರ್ ಆರೋಪಿಸಿದ್ದಾರೆ.

You cannot copy contents of this page