ಚಿನ್ನ ಕಳ್ಳಸಾಗಾಟ, ಹವಾಲಾ ಹಣ ವ್ಯವಹಾರ : ತಳಂಗರೆ, ಚೆಂಬರಿಕದಲ್ಲಿ ಇ.ಡಿ. ದಾಳಿ

ಕಾಸರಗೋಡು: ಹವಾಲಾ, ಚಿನ್ನ ಕಳ್ಳ ಸಾಗಾಟ ಹಾಗೂ  ವಿದೇಶಿ ಹಣ ವಿನಿಮಯ ಕಾನೂನು (ಫೆಮ) ಉಲ್ಲಂಘಿಸಿ ನಡೆದ ವ್ಯವಹಾರಕ್ಕೆ    ಸಂಬಂಧಿಸಿ ಕಾಸರಗೋಡು ಜಿಲ್ಲೆಯ ಎರಡು ಕಡೆ ಸೇರಿದಂತೆ ರಾಜ್ಯದ  ವಿವಿಧ ಜಿಲ್ಲೆಗಳಲ್ಲಾಗಿ 10 ಕೇಂದ್ರಗಳಿಗೆ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ) ಇಂದು ಬೆಳಿಗ್ಗೆ  ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ಆರಂಭಿಸಿದೆ. ಇದರಂತೆ ಕಾಸರಗೋಡು ನಗರದ ತಳಂಗರೆ ಬಾಂಗೋಡಿನ ಅಹಮ್ಮದ್ ಸಮೀರ್  ಚೆಂಗಳ ಅಬೂಬಕ್ಕರ್  ಎಂಬವರ ಸೈನಬಾ ಮಂಜಿಲ್ ಎಂಬ ಮನೆ,   ಚೆಂಬರಿಕ ಚಂದ್ರಗಿರಿಯಲ್ಲಿರುವ ಶಾಫಿ ಚೆಂಬರಿಕ ಎಂಬವರ ಚಾಪಾ ಹೌಸ್‌ನಲ್ಲಿ ಇ.ಡಿ ದಾಳಿ ನಡೆಸಿ ಪರಿಶೀಲನೆ ಮುಂದುವರಿಸುತ್ತಿದೆ.   ಕಣ್ಣೂರು ಇರವೇರಾಯಿಯ ಮುಹಮ್ಮದ್ ವಲೀದ್, ಕಲ್ಲಿಕೋಟೆ ಮಂಗಕುನ್ನಿನ ಮಂಗತ್  ಮುಹಮ್ಮದ್ ಜೌಹಾರ್, ಎ.ಕೆ, ಕೊಯಿಲಾಂಡಿ ಮಡಕ್ಕರದ ನೌಶಾದ್, ಮಲಪ್ಪುರಂ ವಂಙರದ ಮುಹಮ್ಮದ್ ಆಶಿಕ್, ತಾನೂರಿನ ಯೂಸಫ್, ಪಾಲಕ್ಕಾಡು ಕುಮಾರನಲ್ಲೂರಿನ ಅಬ್ದುಲ್ ರೌಫ್, ಅನಧಿಕೃತ ಆರ್ಥಿಕ  ವ್ಯವಹಾರಗಳು, ಚಿನ್ನ ಸಾಗಾಟಕ್ಕೆ ಸಂಬಂಧಿಸಿದ ದಾಖಲುಪತ್ರಗಳು, ಡಿಜಿಟಲ್ ಮಾಹಿತಿಗಳ ಸೇರಿದಂತೆ  ಹಲವು ದಾಖಲುಪತ್ರಗಳನ್ನು ಇ.ಡಿ ಮನೆಗಳಿಂದ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆದರೆ ಈ ಕುರಿತಾದ ಹೆಚ್ಚಿನ ಮಾಹಿತಿಗಳನ್ನು ಇ.ಡಿ ಬಹಿರಂಗಪಡಿಸಿಲ್ಲ.  ಹೀಗೆ ದಾಳಿ ನಡೆದ ಮನೆಯವರ ಪೈಕಿ ಹೆಚ್ಚಿನವರು ಈಗ ಗಲ್ಫ್‌ನಲ್ಲಿದ್ದಾರೆಂದು ಇ.ಡಿ ತಿಳಿಸಿದೆ.

You cannot copy contents of this page