ಕಾಸರಗೋಡು: ಸಹಕಾರಿ ಬ್ಯಾಂ ಕ್ಗಳ?ಠೇವಣಿಗಳಿಗೆ ಗ್ಯಾರಂಟಿ ಖಚಿತ ಪಡಿಸಲು ಕ್ರಮ ಕೈಗೊಳ್ಳುವುದಾಗಿಯೂ, ಸಹಕಾರಿ ವಲಯದ ಬೆಳವಣಿಗೆಗೆ ಸರ ಕಾರದ ಪೂರ್ಣ ಬೆಂಬಲ ಉಂಟಾಗಲಿ ದೆಯೆಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ನುಡಿದರು. ಕಾಞಂಗಾಡ್ನಲ್ಲಿ ರಾಜ್ಯ ಸಹಕಾರಿ ವಾರಾಚರಣೆಯ ಸಮಾರೋಪ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯಾರೇ ಆದರೂ ಠೇವಣಿಯಿರಿಸಿದರೆ ಅದಕ್ಕೆ ಗ್ಯಾರಂಟಿ ನೀಡಬೇಕು. ಸಹಕಾರಿ ವಲಯದ ವಿಶ್ವಾಸಾರ್ಹತೆಯನ್ನು ಮರು ಸ್ಥಾಪಿಸಬೇಕು. ಠೇವಣಿಗಳನ್ನು ಇತರ ಅಗತ್ಯಗಳಿಗೆ ಉಪಯೋಗಿಸುವವರ ವಿರುದ್ಧ ದಯಾರಹಿತವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿ ದರು. ಅಲ್ಲದೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅದಕ್ಕೆ ಯಾವುದೇ ರಾಜಕೀಯ ಪಕ್ಷಗಳೆಂಬ ಭೇದಭಾವ ಇರದೆಂದು ಮುಖ್ಯಮಂತ್ರಿ ನುಡಿದರು. ಕೇರಳ ಬ್ಯಾಂಕ್ ಪ್ರಸ್ತುತ ರಿಸರ್ವ್ ಬ್ಯಾಂಕ್ನ ನಿಯಂತ್ರಣದಲ್ಲಿದೆ. ಸಹಕಾರಿ ಬ್ಯಾಂಕ್ಗಳಿಗೆ ಅವುಗಳದೇ ಆದ ಸ್ವಾತಂತ್ರ್ಯಇರಬೇಕು. ಸಹಕಾರಿ ವಲಯವನ್ನು ಬಲಪಡಿಸಬೇಕಾಗಿರು ವುದು ಊರಿನ ಅಭಿವೃದ್ಧಿಗೆ ಅಗತ್ಯವಾ ಗಿದೆ. ಠೇವಣಿಗೆ ಗ್ಯಾರಂಟಿ ಜ್ಯಾರಿಯಾ ದಾಗ ಸಹಕಾರಿ ವಲಯದಲ್ಲಿ ಭಾರೀ ಬೆಳವಣಿಗೆ ಉಂಟಾಗಬಹುದೆಂಬ ನಿರೀಕ್ಷೆಯಿರಿಸಲಾಗಿದೆ. ಅಲ್ಲದೆ ಸಹಕಾರಿ ವಲಯದಲ್ಲಿ ಇನ್ನಷ್ಟು ಅವಕಾಶಗಳು ಸೃಷ್ಟಿಯಾಗಲಿದೆ.
ಸಪ್ಲೈಕೋ ಪ್ರಸ್ತುತ 13 ಸಾಮಗ್ರಿಗಳಿಗೆ ಸಬ್ಸಿಡಿ ನೀಡುತ್ತದೆ. ಖಾಸಗಿ ವಲಯಗಳಲ್ಲಿ ಸಪ್ಲೈ ಚೈನ್ ವ್ಯವಸ್ಥೆಯಲ್ಲಿ ಕನಿಷ್ಠ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಿ ಸುರಕ್ಷಿತವಾಗಿ ಸಂಗ್ರಹಿಸಿ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ರೀತಿ ಪ್ರಸ್ತುತ ಜ್ಯಾರಿಯಲ್ಲಿದೆ. ಸಹಕಾರಿ ಬ್ಯಾಂಕ್ಗಳ ಕನ್ಸ್ಟ್ರೋಶಿ ಯಮ್ ರೂಪೀಕರಿಸಿ ಆಧುನಿಕ ಸಂಗ್ರಹ ಕೇಂದ್ರಗಳನ್ನು ರೂಪೀಕರಿಸಿ ಸಪ್ಲೈಕೋ ಮಾರ್ಕೆಟ್ನಿಂದ ಖರೀದಿಸುವ ಕೃಷಿಯುತ್ಪನ್ನಗಳನ್ನು ಆ ಸಂಗ್ರಹ ಕೇಂದ್ರಗಳಲ್ಲಿ ತೆಗೆದಿರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅದರ ಲಾಭವನ್ನು ಜನಸಾಮಾನ್ಯರಿಗೆ ಸಬ್ಸಿಡಿ ಉತ್ಪನ್ನಗಳನ್ನು ಲಭ್ಯಗೊಳಿಸುವುದಕ್ಕೆ ಉಪಯೋಗಿಸಿದರೆ ಸಹಕಾರಿ ವಲಯ, ಸಪ್ಲೈಕೋ ಏಕಪ್ರಕಾರವಾಗಿ ಬೆಳೆಯಲು ಸಾಧ್ಯವಿದೆಯೆಂದು ಮುಖ್ಯಮಂತ್ರಿ ನುಡಿದರು. ಸಾಮಾಜಿಕ ಆರ್ಥಿಕ ಅಭಿವೃದ್ಧಿಯಲ್ಲಿ ಸರಕಾರಕ್ಕೆ ನೇರವಾಗಿ ಮಧ್ಯೆಪ್ರವೇಶಿಸಲು ಸಾಧ್ಯವಾಗದ ವಲಯಗಳಲ್ಲಿ ಸಹಕಾರಿ ವಲಯಕ್ಕೆ ಈ ರೀತಿಯ ಧಾರಾಳ ಸಾಧ್ಯತೆಗಳು ಇದೆಯೆಂದು ಮುಖ್ಯಮಂತ್ರಿ ನುಡಿದರು. ಅಬಕಾರಿ ಸಚಿವ ಎಂ. ಲಿಜು ಅಧ್ಯಕ್ಷತೆ ವಹಿಸಿದರು. ಹಲವು ಗಣ್ಯರು ಭಾಗವಹಿಸಿದರು.






