ಕಾಸರಗೋಡು: ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಂಗವಾಗಿ ಸಾಂಸ್ಕೃತಿಕ ಸಮಿತಿ ನೇತೃತ್ವದಲ್ಲಿ ಪೆರಿಯಾ ಜಿಎಚ್‌ಎಸ್‌ಎಸ್‌ನಲ್ಲಿ ಕಲೋತ್ಸವ ಮ್ಯಾರಥಾನ್ ಆಯೋಜಿಸಲಾಯಿತು. ವಾರ್ಡ್ ಪ್ರತಿನಿಧಿ ಉಷಾ ಟೀಚರ್‌ರ ಉಪಸ್ಥಿತಿಯಲ್ಲಿ ಅಂತಾರಾಜ್ಯ ಅಥ್ಲೆಟ್ ಚಂದ್ರನ್ ಪಾಕಂ ಫ್ಲಾಗ್‌ಆಫ್ ನಡೆಸಿದರು. ಜಿಲ್ಲಾ ಒಲಿಂಪಿಕ್ ಅಸೋಸಿಯೇಶನ್ ಉಪಾಧ್ಯಕ್ಷ ಅಬ್ದುಲ್ ಲತೀಫ್, ಪಿ.ಟಿ.ಎ ಅಧ್ಯಕ್ಷ ಸತ್ಯನ್ ಮಠತ್ತಿಲ್, ಪ್ರಾಂಶುಪಾಲ ವಿಶ್ವಂಭರನ್, ಎಸ್.ಎಂ.ಸಿ ಅಧ್ಯಕ್ಷ ಗೋಪಾಲನ್, ಅಧ್ಯಾಪಕರು, ಪಿಟಿಎ ಸದಸ್ಯರು, ಮಕ್ಕಳು, ಸ್ಥಳೀಯರು ಭಾಗವಹಿಸಿದರು. ಅಧ್ಯಾಪಿಕೆಯರಾದ ಸ್ವಪ್ನ, ಶೀಜಾ, ಸತಿ ಶ್ರೀಲಕ್ಷ್ಮಿ, ಸುರೇಶ್, ಸೌಮ್ಯ ನೇತೃತ್ವ ನೀಡಿದರು. ಈ ತಿಂಗಳ ೨೪ರಂದು ಆರಂಭಗೊಳ್ಳುವ ಕಂದಾಯ ಜಿಲ್ಲಾ ಶಾಲಾ ಕಲೋತ್ಸವಕ್ಕೆ ಸಿದ್ಧತೆಗಳು ಅಂತಿಮ ಹಂತದಲ್ಲಿದೆ.




