ಮಂಜೇಶ್ವರ: ಮಂಜೇಶ್ವರ ಪಂಚಾಯತ್ ಹಾಗೂ ಬಿ.ಎಫ್.ಎಚ್.ಸಿ. ಮಂಜೇಶ್ವರ ವತಿಯಿಂದ 14ನೇ ಪಂಚವಾರ್ಷಿಕ ಯೋಜನೆ ಮತ್ತು 2026-27ನೇ ವಾರ್ಷಿಕ ಯೋಜನೆಯ ಅಡಿಯಲ್ಲಿ ವಿಶೇಷ ಮಹಿಳಾ ರೋಗನಿರ್ಣಯ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲಾಗಿದೆ.
ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸುವರು. ಶಿಬಿರ ನ. ೨೩, ೨೪ರಂದು ಬೆಳಿಗ್ಗೆ ೯.೩೦ರಿಂದ ಮಂಜೇಶ್ವರ ಗಿಳಿವಿಂಡು ನಲ್ಲಿ ನಡೆಯಲಿದೆ. ಮಂಜೇಶ್ವರ ಬಿ.ಎಫ್.ಎಚ್.ಸಿ.ಯ ಅಧಿಕಾರಿ ಡಾ. ಪ್ರಭಾಕರ ರೈ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿರುವರು. ಶಿಬಿರ ದಲ್ಲಿ ೩೦ ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಮ್ಯಾಮೋಗ್ರಾಮ್ ಪರೀಕ್ಷೆ, ಪ್ಯಾಪ್ಸ್ಮೀಯರ್ ಪರೀಕ್ಷೆ, ಎಫ್.ಎನ್.ಎ.ಸಿ. (ಫೈನ್ ನೀಡಲ್ ಆಸ್ಪಿರೇಷನ್ ಸೈಟಾಲಜಿ) ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆ ಸೌಲಭ್ಯಗಳು ಲಭ್ಯವಿರಲಿವೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಪಾಸಣಾ ಸೌಲಭ್ಯಗಳನ್ನು ಪಡೆಯುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





