ಕರ್ನಾಟಕ ಮದ್ಯ ಸಹಿತ ಸ್ಕೂಟರ್ ವಶ
ಕಾಸರಗೋಡು: ನಗರದ ಬೀರಂತಬೈಲು ಲಕ್ಷ್ಮೀವೆಂಕಟೇಶ ರಸ್ತೆ ಬಳಿ ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್‌ಸ್ಪೆಕ್ಟರ್ ಜಿಜು ಇ.ಟಿ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚ ರಣೆಯಲ್ಲಿ ೬.೧೨ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಅಡ್ಕತ್ತಬೈಲು ಅರ್ಜಾಲ್ ಹೌಸ್‌ನ ಅನಿಲ್ ಕುಮಾರ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಆತ ಪರಾರಿಯಾಗಿ ರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮಾಲು ಸಾಗಿಸಲು ಬಳಸ ಲಾಗುತ್ತಿ ರುವುದಾಗಿ ಹೇಳಲಾಗುತ್ತಿರುವ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ.
ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್‌ಗಳಾದ ಎ.ವಿ. ರಾಜೀವನ್, ರಂಜಿತ್ ಕೆ.ವಿ, ಪ್ರಶಾಂತ್ (ಗ್ರೇಡ್) ಮತ್ತು ಸಿವಿಲ್ ಎಕ್ಸೈಸ್ ಆಫೀಸರ್ ಗಳಾದ ರಾಜೇಶ್ ಪಿ, ಮುರಳಿ ಮತ್ತು ಕಣ್ಣನ್ ಎಂಬವರು ಒಳಗೊಂಡಿದ್ದರು.