ಕುಬಣೂರು ಶಾಲೆಯಲ್ಲಿ ಕಲಿಕೋತ್ಸವ

ಉಪ್ಪಳ: ಕುಬಣೂರು ಶ್ರೀರಾಮ ಎ ಯುಪಿ ಶಾಲೆಯಲ್ಲಿ ಕಲಿಕೋತ್ಸವ ಮೀನಾರು ಪಕೀರ ಶೆಟ್ಟಿ ಸಭಾಂಗ ಣದಲ್ಲಿ ಜರಗಿತು.
ವಿದ್ಯಾರ್ಥಿನಿಯರ ಪ್ರಾರ್ಥ ನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಂU Àಲ್ಪಾಡಿ ಪಂಚಾಯತ್ ಸದಸ್ಯ ವಿಜಯ್ ಕುಮಾರ್ ರೈ ಉದ್ಘಾಟಿಸಿದರು. ಬಳಿಕ ಮಕ್ಕಳ ಕಲಿಕಾ ಉತ್ಪನ್ನವನ್ನು ಒಳಗೊಂಡ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಎಂ. ಪಿ. ಎಸ್. ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ಎಂ.ಪಿ ಬಾಲಕೃಷ್ಣ ಶೆಟ್ಟಿ ಕಲಿಕೋತ್ಸವದ ಪ್ರಾಧಾನ್ಯತೆಯ ಕುರಿತು ಹೇಳಿದರು. ಹಿರಿಯ ಅಧ್ಯಾಪಕ ಯಾಹ್ಯ ಖಾನ್ ಶುಭಾಶಂಸನೆಗೈದರು. ಶಾಲಾ ಪ್ರಬಂಧಕಿ ಮೋಕ್ಷದ ಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾಯಿನಿ ಮೀರಾವತಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಾಪಿಕೆ ಸಾನಿಧ್ಯ ನಿರೂಪಿಸಿ, ಅಧ್ಯಾಪಿಕೆ ಶ್ರೀದೇವಿ ವಂದಿಸಿದರು. ಬಳಿಕ ಶಾಲಾ ಮಟ್ಟದ ಕಲಿಕೋತ್ಸವವು ಜರಗಿತು.

You cannot copy contents of this page