ಜಾಮೀನಿನಲ್ಲಿ ಬಿಡುಗಡೆಗೊಳಿಸಿದ ಆರೋಪಿಯ ನಿಗೂಢ ಸಾವು: ದೇಹದಲ್ಲಿ ಹಲ್ಲೆಯ ಗುರುತುಗಳು ಪತ್ತೆ ಮೂರು ಮಂದಿ ಪೊಲೀಸ್ ಕಸ್ಟಡಿಯಲ್ಲಿ

ಮಂಜೇಶ್ವರ: ಗಾಂಜಾ ಸೇದಿ ಬೊಬ್ಬಿಟ್ಟ ಎಂಬ ಆರೋಪದಂತೆ ಪೊಲೀಸರು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡ ಸಂಬಂಧಿಕನೊಂದಿಗೆ ತೆರಳಿದ ಆರೋಪಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು  ಮೂರು ಮಂದಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮೀಯಪದವು ಮದಕ್ಕಳದ ದಿ| ಅಬ್ದುಲ್ಲರ ಪುತ್ರ ಮೊಯ್ದೀನ್ ಆರಿಫ್ (೨೨)ರ ಸಾವಿಗೆ ಸಂಬಂಧಿಸಿ ಪೊಲೀಸರು ಮೂರು ಮಂದಿಯನ್ನು ಕಸ್ಟಡಿಗೆ ತೆಗೆದು ತನಿಖೆ ಮುಂದುವರಿಸಿದ್ದಾರೆ. ಗಂಭೀರ ಹಲ್ಲೆಯೇ ಮೊಯ್ದೀನ್ ಆರಿಫ್‌ರ ಸಾವಿಗೆ ಕಾರಣ ವೆಂದು ಮೃತದೇಹದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ  ವರದಿಯಲ್ಲಿ ತಿಳಿಸಲಾಗಿದೆ. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಿನ್ನೆ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಪೂರ್ಣ ವರದಿ ಇಂದು ಲಭಿಸಲಿದ್ದು, ಅನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.   ಗಾಂಜಾ ಸೇವಿಸಿ ಬೊಬ್ಬಿಡುತ್ತಿದ್ದಾನೆಂಬ ಬಗ್ಗೆ ನಾಗರಿಕರು ನೀಡಿದ ದೂರಿನ ಹಿನ್ನೆಲೆ ಯಲ್ಲಿ ಆದಿತ್ಯವಾರ ರಾತ್ರಿ ಮೊಯ್ದೀನ್ ಆರಿಫ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದರು. ಬಳಿಕ ಆತನನ್ನು ಜಾಮೀ ನಿನಲ್ಲಿ ಬಿಡುಗಡೆಗೊಳಿಸಿದ್ದು,  ಸಂಬಂಧಿ ಕನೊಬ್ಬನ ಜೊತೆ ಮನೆಗೆ ತೆರಳಿದ್ದರು. ಆದರೆ ಸೋಮವಾರ ಬೆಳಿಗ್ಗೆ ರಕ್ತವಾಂತಿ ಮಾಡಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಮೊಯ್ದೀನ್ ಆರಿಫ್‌ನನ್ನು ಮಂಗಳೂ ರಿನ ಆಸ್ಪತ್ರೆಗೆ ತಲುಪಿಸಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇದರಿಂದ ಮನೆಗೆ ತಲುಪಿಸಿದ ಮೃತದೇಹದಲ್ಲಿ  ಹಲ್ಲೆಯ ಗಾಯಗಳು ಕಂಡುಬಂದ ಹಿನ್ನೆಲೆಯಲ್ಲಿ ಸಾವಿಗೆ ಕಾರಣ ಹಲ್ಲೆಯಾಗಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದರು.  ಬಳಿಕ ಈ ಬಗ್ಗೆ ಪೊಲೀಸರಿಗೆ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಿ   ಬಳಿಕ ಸಮಗ್ರ ಮರಣೋತ್ತರ ಪರೀಕ್ಷೆಗೆ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯ ಲಾಗಿತ್ತು.  ಇದೇ ವೇಳೆ ಯುವಕನಿಗೆ ಪೊಲೀಸರು ಹಲ್ಲೆಗೈದಿರುವುದಾಗಿ ನಾಗರಿ ಕರು ಹಾಗೂ ಸಂಬಂಧಿಕರು ಆರೋಪಿ ಸಿದ್ದರು. ಆದರೆ ಅದನ್ನು ನಿರಾಕರಿಸಿದ ಪೊಲೀಸರು, ಜಾಮೀನಿನಲ್ಲಿ ಯುವಕ ನನ್ನು ಕರೆದೊಯ್ದವರು ಹಲ್ಲೆಗೈದುದರಿಂದ ಯುವಕ ಸಾವಿಗೀಡಾಗಿರುವುದಾಗಿ ಪೊಲೀಸರು  ತಿಳಿಸಿದ್ದಾರೆ. ತನಿಖೆಯ ಅಂಗವಾಗಿ ಮೊಯ್ದೀನ್ ಆರಿಫ್‌ನನ್ನು ಜಾಮೀನಿನಲ್ಲಿ  ಬಿಡುಗಡೆಗೊಳಿಸಿದ ಕೆಲವು ಮಂದಿಯನ್ನು ತನಿಖೆಗೊಳಪ ಡಿಸಿದಾಗ ಹಲ್ಲೆಯ ಕುರಿತು ಸ್ಪಷ್ಟ ಪುರಾವೆಗಳು ಲಭಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯಂಗವಾಗಿ ಮೂರು ಮಂದಿಯನ್ನು ಕಸ್ಟಡಿಗೆ ತೆಗೆಯಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕ  ಬಂಧನ ಸಹಿತ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page